alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಶಾರುಖ್ ಬಗ್ಗೆ ಇಂಥಾ ಕೆಟ್ಟ ಸುದ್ದಿ..!

sharukh

ಸೆಲೆಬ್ರಿಟಿಗಳ ಸಾವಿನ ಬಗ್ಗೆ ಸುಳ್ಳು ವದಂತಿಗಳನ್ನು ವೈರಲ್ ಮಾಡುವ ಚಾಳಿ ಹೆಚ್ಚಾಗ್ತಾನೇ ಇದೆ. ಈ ಬಾರಿ ಕಿಡಿಗೇಡಿಗಳು ಸಾಮಾಜಿಕ ತಾಣದಲ್ಲಿ ಬಾಲಿವುಡ್ ಕಿಂಗ್ ಖಾನ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅದು ಕೂಡ ಅಂತಿಂಥಾ ಶಾಕ್ ಅಲ್ಲ, ಶಾರುಖ್ ಸಾವಿನ ಸುದ್ದಿ.

ಹೌದು, ಪ್ಯಾರಿಸ್ ನಲ್ಲಿ ಸಂಭವಿಸಿದ ವಿಮಾನ ಅಪಘಾತವೊಂದರಲ್ಲಿ ನಟ ಶಾರುಖ್ ಖಾನ್ ಮೃತಪಟ್ಟಿದ್ದಾರೆ ಅನ್ನೋ ಸುಳ್ಳು ಸುದ್ದಿಯೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಫ್ರೆಂಚ್ ವೆಬ್ ಸೈಟ್ ಒಂದರಲ್ಲಿ ಮೊದಲು ಈ ಸುದ್ದಿ ಕಾಣಿಸಿಕೊಂಡಿತ್ತು.

ಎಸ್ ಆರ್ ಕೆ ಹಾಗೂ ವಿಮಾನದಲ್ಲಿದ್ದ ಇನ್ನೊಂದಷ್ಟು ಮಂದಿ ಸಾವನ್ನಪ್ಪಿದ್ದಾರೆ ಅಂತಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು. ಅಷ್ಟೇ ಅಲ್ಲ ಶಾರುಖ್ ಸಾವಿನ ಬಗ್ಗೆ ಫ್ರಾನ್ಸ್ ನ ವಿಮಾನಯಾನ ಇಲಾಖೆ ಸಂತಾಪ ಸೂಚಿಸಿದೆ ಅಂತಾನೂ ಬರೆಯಲಾಗಿತ್ತು.

ಮಗಳು ಸುಹಾನಾಳ ಹುಟ್ಟುಹಬ್ಬ ಆಚರಿಸಿದ ಬಳಿಕ ಶಾರುಖ್ ಜಿ550 ಜೆಟ್ ನಲ್ಲಿ ತಮ್ಮ ತಂಡದೊಂದಿಗೆ ಗಲ್ಫ್ ಸ್ಟ್ರೀಮ್ ಗೆ ಹೊರಟಿದ್ರು. ಆಗ ದುರ್ಘಟನೆ ಸಂಭವಿಸಿದೆ ಅಂತಾ ಹೇಳಲಾಗಿತ್ತು. ಆದ್ರೆ ಇದೊಂದು ಸುಳ್ಳು ಸುದ್ದಿ. ನಟ ಶಾರುಖ್ ಸಂಪೂರ್ಣ ಆರೋಗ್ಯವಾಗಿದ್ದು, ಆನಂದ್ ಎಲ್ ರೈ ಅವರ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...