alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ ಬಂದ ಕರೆಗೆ ನಟ ಅಮೀರ್ ಖಾನ್ ಸ್ಪಂದನೆ

ಸಾಮಾಜಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಬಾಲಿವುಡ್ ನಟ ಅಮೀರ್ ಖಾನ್‌, ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸೌಂಡ್‌ ಎಂಜಿನಿಯರ್‌ನನ್ನು ಅಮೀರ್‌ ಖಾನ್‌ ಕಾಪಾಡಿದ್ದಾರೆ.

ದಂಗಲ್‌ ಚಿತ್ರದಲ್ಲಿ ತಂತ್ರಜ್ಞಾನ ವಿಭಾಗದ ಸೌಂಡ್ ಎಂಜಿನಿಯರ್‌ ಆಗಿ ಕೆಲಸ ಮಾಡಿದ್ದ ಶಜಿತ್ ಕೊಯೇರಿ(44), ಸೆ.7 ರಂದು ಸ್ಟ್ರೋಕ್‌(ಪಾರ್ಶ್ವವಾಯು) ಉಂಟಾಗಿದ್ದು, ಕುಟುಂಬಸ್ಥರು ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಎಂಆರ್‌ಐ ಮಾಡಿದ ಬಳಿಕ ಚಿಕಿತ್ಸೆ ನೀಡಲು ವೈದ್ಯರೇ ಇರಲಿಲ್ಲ. ಹೊತ್ತು ಕಳೆದಷ್ಟು ಐಸಿಯುನಲ್ಲಿರಿಸಿದ್ದ ಶಜಿತ್ ಆರೋಗ್ಯ ಸ್ಥಿತಿ ಹದಗೆಡುತ್ತಿತ್ತು. ಈ ವೇಳೆ ಕುಟುಂಬ ಸದಸ್ಯರು ಅಮೀರ್‌ ಖಾನ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.

ಮಧ್ಯರಾತ್ರಿ ಆಸ್ಪತ್ರೆಗೆ ಧಾವಿಸಿದ ಅಮೀರ್‌ ಖಾನ್‌, ಶಜಿತ್ ಅವರನ್ನು ಅಂಧೇರಿಯ ಕೋಕಿಲಾ ಬೆನ್‌ ಧೀರೂಬಾಯಿ ಅಂಬಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ನಡುರಾತ್ರಿ ಅನಿಲ್ ಅಂಬಾನಿಯವರಿಗೆ ಕರೆ ಮಾಡಿ, ಸೂಕ್ತ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭ್ಯವಾದ ಕಾರಣ ಶಜಿತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಂಆರ್‌ಐ ಬಳಿಕ ಸ್ಟ್ರೋಕ್‌ ಆಗಿರುವುದಾಗಿ ಸಿಬ್ಬಂದಿ ಹೇಳಿದ್ದಾರೆ. ಆದರೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಯಾರೂ ಇರಲಿಲ್ಲ. ಸಾಕಷ್ಟು ಬಾರಿ ಹೇಳಿದರೂ ವೈದ್ಯರು ಬಂದೇ ಇಲ್ಲ ಎಂದು ಶಜಿತ್ ಕುಟುಂಬ ಸದಸ್ಯರು ದೂರಿದ್ದಾರೆ.

ಕುಟುಂಬ ಸದಸ್ಯರ ಆರೋಪಗಳನ್ನು ಆಸ್ಪತ್ರೆ ಮೂಲಗಳು ತಳ್ಳಿ ಹಾಕಿದ್ದು, ಮೂತ್ರಪಿಂಡ ಸಮಸ್ಯೆ ಜತೆ ಅವರಿಗೆ ಪೈಲ್ಸ್‌ ಇತ್ತು. ಅವರಿಗೆ ರಕ್ತ ನೀಡಲಾಗುತ್ತಿತ್ತು. ಆ ವೇಳೆ ಪಾರ್ಶ್ವವಾಯುಗೆ ತುತ್ತಾಗುತ್ತಿರುವುದನ್ನು ಗಮನಿಸಿ, ಎಂಆರ್‌ಐ ಮಾಡಲಾಯಿತು. ಐಸಿಯುಗೆ ದಾಖಲಿಸಿದ ಬಳಿಕ ಅವರಿಗೆ ಹೃದಯಾಘಾತವೂ ಆಗಿತ್ತು. ಈ ವೇಳೆ ಇದಕ್ಕೆ ಪೂರಕ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಬಾಂದ್ರಾ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಹೇಮಂತ್‌ ಮೆಹ್ತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...