alex Certify
ಕನ್ನಡ ದುನಿಯಾ       Mobile App
       

Kannada Duniya

ಯಾರಿಗೂ ಕಮ್ಮಿ ಇಲ್ಲ ಅಜಯ್ ದೇವಗನ್

download-2

ದೀಪಾವಳಿ ಹಬ್ಬದಂದು ಬಾಲಿವುಡ್ ನ ಎರಡು ಚಿತ್ರಗಳು ತೆರೆಗೆ ಬಂದಿವೆ. ‘ಎ ದಿಲ್ ಹೇ ಮುಷ್ಕಿಲ್’, ಅಜಯ್ ದೇವಗನ್ ಅಭಿನಯದ ‘ಶಿವಾಯ್’ ಗೆ ಟಕ್ಕರ್ ನೀಡುತ್ತೆ ಎಂದು ಭಾವಿಸಲಾಗಿತ್ತು. ಆದ್ರೆ ಅಜಯ್ ಚಿತ್ರಕ್ಕೆ ದೊಡ್ಡ ಹೊಡೆತವೇನೂ ಬಿದ್ದಿಲ್ಲ. ಸದ್ಯದಲ್ಲಿಯೇ ಶಿವಾಯ್ ಚಿತ್ರ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ದಟ್ಟವಾಗಿದೆ.

ಅಜಯ್ ದೇವಗನ್ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗ್ತಾ ಇದೆ. ಶುಕ್ರವಾರ ಹೊರತುಪಡಿಸಿದ್ರೆ ಚಿತ್ರ ಈಗಾಗಲೇ 70.41 ಕೋಟಿ ಗಳಿಕೆ ಕಂಡಿದೆ. ಮೊದಲ ದಿನ 10.24 ಕೋಟಿ, ಶನಿವಾರ 10.6 ಕೋಟಿ, ಭಾನುವಾರ 8.26 ಕೋಟಿ, ಸೋಮವಾರ 17.35 ಕೋಟಿ, ಮಂಗಳವಾರ 11.5 ಕೋಟಿ, ಬುಧವಾರ 7.40 ಕೋಟಿ ಹಾಗೂ ಗುರುವಾರ 6.5 ಕೋಟಿ ಗಳಿಕೆ ಕಂಡಿದೆ ‘ಶಿವಾಯ್’. ಇನ್ನು ಈ ವೀಕೆಂಡ್ ನಲ್ಲಿ ಕೂಡ ಭರ್ಜರಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.

ಇನ್ನು ಕರಣ್ ನಿರ್ದೇಶನದ ‘ಎ ದಿಲ್ ಹೇ ಮುಷ್ಕಿಲ್’  ಕೂಡ ಹಿಂದೆ ಬಿದ್ದಿಲ್ಲ. ಈವರೆಗೆ 80.19 ಕೋಟಿ ಗಳಿಕೆ ಮಾಡಿದ್ದು, ಗಳಿಕೆಯಲ್ಲಿ ‘ಶಿವಾಯ್’ ಗಿಂತ 10 ಕೋಟಿ ರೂಪಾಯಿ ಹೆಚ್ಚಿದೆ. ಇದು ದೊಡ್ಡ ಮುನ್ನಡೆಯಲ್ಲ ಎನ್ನೋದು ತಜ್ಞರ ಅಭಿಪ್ರಾಯ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...