alex Certify
ಕನ್ನಡ ದುನಿಯಾ       Mobile App
       

Kannada Duniya

ಸೂರಿ, ಧನಂಜಯ್ ವಿರುದ್ಧ ರೊಚ್ಚಿಗೆದ್ರು ‘ಟಗರು’ ಶಿವಣ್ಣನ ಫ್ಯಾನ್ಸ್

ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ, ಸಿನಿ ರಸಿಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳಿಂದ ನಿರ್ದೇಶಕ ಸೂರಿ ಮತ್ತು ಡಾಲಿ ಪಾತ್ರಧಾರಿ ಧನಂಜಯ್ ಅವರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಚಿತ್ರದ ದೃಶ್ಯಗಳಲ್ಲಿ ಖಳನಾಯಕರಾದ ಧನಂಜಯ್ ಮತ್ತು ವಸಿಷ್ಠ ಸಿಂಹ ಅವರು ಶಿವಣ್ಣನ ಕುರಿತಾಗಿ ಆಡಿರುವ ಮಾತುಗಳು ಅಭಿಮಾನಿಗಳನ್ನು ಕೆರಳಿಸಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಇದು ಗಮನಕ್ಕೆ ಬರುತ್ತಲೇ ‘ಆ’ ಮಾತುಗಳಿಗೆ ಬೀಪ್ ಸೌಂಡ್ ಹಾಕಲು ಚಿತ್ರತಂಡ ತೀರ್ಮಾನಿಸಿದೆ.

ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ, ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಟಗರು’ ಚಿತ್ರದಲ್ಲಿ ಚಿತ್ರಕತೆ, ಪಂಚಿಂಗ್ ಡೈಲಾಗ್ಸ್ ಹಾಗೂ ಸಂಗೀತ ಹೈಲೈಟ್ ಆಗಿದೆ. ಶಿವಣ್ಣ, ಧನಂಜಯ, ವಸಿಷ್ಠ ಸಿಂಹ, ಭಾವನಾ, ದೇವರಾಜ್, ಅಚ್ಯುತ್ ಕುಮಾರ್ ಮೊದಲಾದವರು ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...