alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಣ್ಣ ‘ಟಗರು’ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದ್ದ ‘ಟಗರು’ ಮೊದಲ ದಿನವೇ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.

ಅಭಿಮಾನಿಗಳು ಮಾತ್ರವಲ್ಲದೇ, ಸಿನಿ ರಸಿಕರು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ, ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಟಗರು’ ಚಿತ್ರದಲ್ಲಿ ಚಿತ್ರಕತೆ, ಪಂಚಿಂಗ್ ಡೈಲಾಗ್ಸ್ ಹಾಗೂ ಸಂಗೀತ ಹೈಲೈಟ್ ಆಗಿದೆ.

ಶಿವಣ್ಣ, ಧನಂಜಯ, ವಸಿಷ್ಠ ಸಿಂಹ, ಭಾವನಾ, ದೇವರಾಜ್, ಅಚ್ಯುತ್ ಕುಮಾರ್ ಮೊದಲಾದವರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಮೇಕಿಂಗ್ ನಿಂದ ಗಮನ ಸೆಳೆದ ‘ಟಗರು’ ಚಿತ್ರದಲ್ಲಿ ಶಿವಣ್ಣ ಪೋಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ಡಾಲಿ ಪಾತ್ರಧಾರಿಯಾಗಿ ಧನಂಜಯ ಅಬ್ಬರಿಸಿದ್ದು, ಎಲ್ಲೆಡೆ ‘ಟಗರು’ ಹವಾ ಜೋರಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...