alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ಯುವಕರಿಂದ ಮತ್ತೊಂದು ಡಿ.ಜೆ. ಸಾಂಗ್

ಮಾ ಡೆಲವಪರ್ಸ್ ಪ್ರೊಡಕ್ಷನ್ಸ್ ಅವರಿಂದ ಎರಡನೇ ಆಲ್ಬಂ ಧ್ವನಿ ಸುರಳಿ ನ.14 ರಂದು ಬಿಡುಗಡೆಯಾಗಲಿದೆ ಎಂದು ಗಾಯಕ ಶಶಿಕುಮಾರ್ ಹೇಳಿದರು.

ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ‘ಹೇ ಮಗಾ ಶಿವಮೊಗ್ಗ’ ತಂಡದ ದ್ವಿತೀಯ ಕೊಡುಗೆ ಇದಾಗಿದೆ. ಗೀತೆಯ ಹೆಸರು ಅಖಿಲ ಕರ್ನಾಟಕ ಕಾಲೇಜು ಹೈಕಳ ಭಕ್ತಿಗೀತೆ ಎಂದಾಗಿದೆ. ಇದಕ್ಕೆ ದೀಪು ಎಂಬುವರು ಸಂಗೀತ ನೀಡಿದ್ದು ಎಸ್.ಎಲ್. ಸುರೇಶ ಸಾಹಿತ್ಯ ಬರೆದಿದ್ದಾರೆ. ಎಸ್.ಆರ್. ವಿವೇಕ್ ನಿರ್ದೇಶನ ಮಾಡಿದ್ದಾರೆ. ಸುನಿತಾ ಸಿಂಗ್ ಇದರ ನಿರ್ಮಾಪಕರು ಎಂದರು.

ಮುಖ್ಯ ಗಾಯಕರಾಗಿ ತಾವು ಹಾಡಿದ್ದು, ಮಕ್ಕಳಾದ ವಿಸ್ಮಯ, ಚಿನ್ಮಯಿ, ಸಿರಿ, ಲಿಶಾ, ಗಣೇಶ, ನಿರ್ಭಯ್, ಪ್ರೇರಣಾ, ಇಶಾನಿಯವರು ಹಾಡಿದ್ದಾರೆ. ಇದೊಂದು ಜನಪ್ರಿಯ ಗೀತೆ ಆಗುವುದರಲ್ಲಿ ಸಂಶಯವಿಲ್ಲ ಎಂದರು.

ಸಾಮಾಜಿಕ ಜಾಲತಾಣಗಳಿಗೆ ಇಂದಿನ ಯುವಕರು ಬಲಿಯಾಗುತ್ತಿದ್ದಾರೆ. ಜಾಲತಾಣಗಳಿಂದ ದುಷ್ಪರಿಣಾಗಳೇ ಹೆಚ್ಚಾಗುತ್ತಿವೆ. ಇದರಿಂದ ಹೊರಬನ್ನಿ ಎಂದು ಕರೆ ನೀಡುವುದೇ ನಮ್ಮ ಹಾಡಿನ ಉದ್ದೇಶವಾಗಿದೆ. ಇದನ್ನು ಪರಿಣಾಮಕಾರಿಯಾಗಿ ನಾವು ಬಳಸಿಕೊಂಡಿದ್ದೇವೆ. ಯುವ ಜನಾಂಗಕ್ಕೆ ಇಷ್ಟವಾಗುವ ರೀತಿಯಲ್ಲಿ ತಾಂತ್ರಿಕತೆ ಇದೆ ಎಂದರು.

ನಮ್ಮ ಈ ಪ್ರಯತ್ನಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಇಂತಹ ಹಾಡುಗಳು ಮತ್ತೆ ಮತ್ತೆ ಬರಲು ಪ್ರೇರಕವಾಗಬೇಕು ಎಂದು ನಿರ್ಮಾಪಕಿ ಸುನಿತಾ ಸಿಂಗ್ ಮನವಿ ಮಾಡಿಕೊಂಡರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...