alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಚಲನ ಮೂಡಿಸಿದೆ ‘ಶಿವಮೊಗ್ಗ’ RAP ಸಾಂಗ್

smg-youth‘ಹೇ ಮಗಾ… ಇದು ಶಿವಮೊಗ್ಗಾ’ ತಂಡವು ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ ರ್ಯಾಪ್ ಸಾಂಗ್ `ಹೇ ಮಗಾ ಇದು ಶಿವಮೊಗ್ಗ’ ಜನಪ್ರಿಯಗೊಂಡು 26ನೇ ಸ್ಥಾನ ಪಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗದವರೇ ಆದ ಗಾಯಕ ಎನ್.ಶಶಿಕುಮಾರ್ ಮಾತನಾಡಿ, ಈಗಾಗಲೇ ಈ ಹಾಡನ್ನು ಲಕ್ಷಾಂತರ ಜನರು ಆಲಿಸಿ ಪ್ರೋತ್ಸಾಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ವಾಟ್ಸಾಪ್ ಮತ್ತು ಫೇಸ್ ಬುಕ್ ನಲ್ಲೂ ಸಹ ಈ ಹಾಡು ಹರಿದಾಡುತ್ತಿದೆ ಎಂದು ತಿಳಿಸಿದರು.

ಹಾಡನ್ನು ಮೆಚ್ಚಿ ಚಿತ್ರೀಕರಣ ಮಾಡಲು ಚಿಂತಿಸಲಾಗಿದೆ. ಹಾಡಿನ ವೀಡಿಯೋ ಚಿತ್ರೀಕರಣಕ್ಕಾಗಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಪ್ರಯತ್ನ ನಡೆಯುತ್ತಿದೆ ಎಂದು ಮಾ ಡೆವಲಪರ್ಸ್ ಪ್ರೊಡಕ್ಷನ್ ನಿರ್ಮಾಪಕಿ ಸುನೀತಾ ಸಿಂಗ್ ತಿಳಿಸಿದರು.

ಚಿತ್ರೀಕರಣದಲ್ಲಿ ಶಿವಮೊಗ್ಗದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತ ಪ್ರತಿಭೆಗಳು ಯಾರೇ ಇದ್ದರೂ ಹಾಡಿನ ವೀಡಿಯೋ ಚಿತ್ರೀಕರಣದಲ್ಲಿ ಭಾಗವಹಿಸಲು ಮೊ:9845388028 ರಲ್ಲಿ ಸಂಪರ್ಕಿಸಿ. ಇತ್ತೀಚಿನ ಭಾವಚಿತ್ರದೊಂದಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಕೋರಿದರು.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...