alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಲ್ಪಾ ಶೆಟ್ಟಿ ಉಟ್ಟ ಸೀರೆ ಬೆಲೆ ಎಷ್ಟು ಅಂತ ಕೇಳಿದ್ರಾ…?

ಕರಾವಳಿ ಬೆಡಗಿ, ಬಾಲಿವುಡ್ ನ ಬ್ಯೂಟಿ ಶಿಲ್ಪಾಶೆಟ್ಟಿ ಕುಂದ್ರಾ ಈಗ ಫ್ಯಾಷನ್ ಲೋಕದಲ್ಲಿ ಮಿಂಚು ಹರಿಸ್ತಿದ್ದಾರೆ. ಅದು ಕೂಡ ಭಾರತೀಯ ನಾರಿಯ ಸೌಂದರ್ಯದ ಕಳೆ ಹೆಚ್ಚಿಸುವ ಅಪ್ಪಟ ಸೀರೆಯ ಮೂಲಕ. ಶಿಲ್ಪಾ ಶೆಟ್ಟಿ ಇತ್ತೀಚೆಗೆ ಟಿವಿ ಷೋ ಒಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಅವರು ಧರಿಸುತ್ತಿರುವ ಮಸಾಬಾ ಸ್ಯಾರಿ ಈಗ ಬಾಲಿವುಡ್ ನ ಫ್ಯಾಷನ್ ಲೋಕದ ಹೊಸ ಟ್ರೆಂಡ್ ಆಗಿಬಿಟ್ಟಿದೆ.

ಇಡೀ ಬಾಲಿವುಡ್ ನಲ್ಲಿ ಶಿಲ್ಪಾ ಶೆಟ್ಟಿ ಸೀರೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಮಸಾಬಾ ಗುಪ್ತಾ ಅವರು ಡಿಸೈನ್ ಮಾಡಿರುವ ಸೀರೆ ನೋಡೋಕೆ ಪ್ರಿಂಟೆಂಟ್ ಸ್ಯಾರಿ ಎಂಬಂತೆ ಕಂಡರೂ ಅದರಲ್ಲಿ ಹಲವು ವಿಶೇಷತೆಗಳಿವೆ. ಹಳದಿ ಬಣ್ಣದ ಸೀರೆಯ ಬಾರ್ಡರ್ ನಲ್ಲಿ ಕಮಲದ ಹೂವಿನ ಚಿತ್ರವಿದೆ. ಶಿಲ್ಪಾ ಶೆಟ್ಟಿ ಆ ಸೀರೆಯನ್ನ ತುಂಬಾ ಚೆನ್ನಾರಿ ಕ್ಯಾರಿ ಮಾಡಿದ್ದಾರೆ. ಅದರಿಂದ ಸೀರೆಗೆ ಮತ್ತೊಂದು ಮೆರುಗು ಸಿಕ್ಕಿದೆ ಅಂತ ಡಿಸೈನರ್ ಮಸಾಬಾ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಫ್ ಶೋಲ್ಡರ್ ಬ್ಲೌಸ್ ಸೀರೆಗೆ ಪರ್ಪೆಕ್ಟ್ ಮ್ಯಾಚ್ ಆಗಿದ್ದು, ಅದಕ್ಕೆ ಸರಿ ಹೊಂದಿರುವ ಆಭರಣಗಳಿಂದಾಗಿ ಸೀರೆಗೆ ರೆಟ್ರೋ ಲುಕ್ ಕೂಡ ನೀಡಬಹುದಾಗಿದೆಯಂತೆ. ಅಂದ ಹಾಗೆ ಈ ಮಸಾಬಾ ಸೀರೆಯ ಬೆಲೆ 15,000 ರೂಪಾಯಿಗಳಂತೆ. ಬೋಲ್ಡ್ ಸ್ಟೇಟ್ ಮೆಂಟ್ ನ ಪ್ರತೀಕ ಅಂತ ಹೇಳಲಾಗ್ತಿರುವ ಈ ಸೀರೆ ಈಗ ಬಾಲಿವುಡ್ ನ ನಾರಿ ಮಣಿಯರಿಗೂ ಅಚ್ಚುಮೆಚ್ಚಾಗಿಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...