alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿ ಮಗನ ಹುಟ್ಟುಹಬ್ಬಕ್ಕೆ ಲಂಡನ್ ನಿಂದ ಬಂತು ಶುಗರ್ ಫ್ರೀ ಲಾಲಿಪಾಪ್

ಫಿಟ್ನೆಸ್ ಗೆ ಇನ್ನೊಂದು ಹೆಸ್ರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ವಯಸ್ಸಾದ್ರೂ ದೇಹ ಸೌಂದರ್ಯ ಕಾಪಾಡಿಕೊಂಡಿರುವ ಶಿಲ್ಪಾ ಆಗಾಗ ಯೋಗ ಹಾಗೂ ವ್ಯಾಯಾಮದ ವಿಡಿಯೋಗಳನ್ನು ವೈರಲ್ ಮಾಡ್ತಿರುತ್ತಾಳೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವ ಶಿಲ್ಪಾ, ಮಗ ವಿಯಾನ್ ಜನ್ಮದಿನದಂದು ಶುಗರ್ ಫ್ರೀ ಪಾರ್ಟಿ ನೀಡಿದ್ದಾಳೆ.

ಶಿಲ್ಪಾ ಶೆಟ್ಟಿ ಮಗ ವಿಯಾನ್ ಮೇ 21 ರಂದು 6 ವರ್ಷಕ್ಕೆ ಕಾಲಿಟ್ಟಿದ್ದಾನೆ. ಶುಕ್ರವಾರ ಶಿಲ್ಪಾ ಸ್ನೇಹಿತರಿಗೆ ಶುಗರ್ ಫ್ರೀ ಪಾರ್ಟಿ ನೀಡಿದ್ದಾಳೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಿಲ್ಪಾ ಹಲವು ವಿಭಿನ್ನ ಆಹಾರಗಳನ್ನು ಮೆನುವಿನಲ್ಲಿ ಸೇರಿಸಿದ್ದಳು. ಹುಟ್ಟುಹಬ್ಬದ ಕೇಕನ್ನು ತೆಂಗಿನ ಹಾಲಿನಿಂದ ಮಾಡಲಾಗಿತ್ತು. ಫ್ರೂಟ್ ಲೊಲ್ಲಿಜ್ ಮತ್ತು ಯಾಕುಲ್ಟ್ ತರಿಸಿದ್ದಳು.

ನನ್ನ ಮಗನ ಬರ್ತ್ ಡೇಯನ್ನು ಭಿನ್ನವಾಗಿ ಆಚರಿಸುತ್ತಿದ್ದೇನೆ. ಪಾರ್ಟಿಯಲ್ಲಿ ಸಂಸ್ಕರಿಸಿದ ಸಕ್ಕರೆ ಇಲ್ಲದ ಆಹಾರವನ್ನು ನೀಡಿದ್ದೇನೆ. ಲಂಡನ್ ನಿಂದ ಲಾಲಿಪಾಪ್ ತರಿಸಿದ್ದೇನೆ. ಅದನ್ನು ಶುದ್ಧ ಹಣ್ಣಿನಿಂದ ಮಾಡಲಾಗಿದೆ. ತೆಂಗಿನಕಾಯಿ ಹಾಲು ಹಾಗೂ ಜೇನುತುಪ್ಪ ಬಳಸಿ ಕೇಕ್ ತಯಾರಿಸಿದ್ದೇನೆ ಎಂದು ಶಿಲ್ಪಾ ಹೇಳಿದ್ದಾಳೆ.

ಮಕ್ಕಳಿಗೆ ಆರೋಗ್ಯವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ಈ ಮೂಲಕ ಹೇಳಿಕೊಡುವ ಯತ್ನ ನನ್ನದು ಎಂದಿದ್ದಾಳೆ ಶಿಲ್ಪಾ. ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ, ವಿಡಿಯೋ ಹಾಕಿರುವ ಶಿಲ್ಪಾ ತೆಂಗಿನಕಾಯಿ ಹಾಲಿನಿಂದ ಕೇಕ್ ಹೇಗೆ ತಯಾರಿಸೋದು ಎಂಬುದನ್ನು ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...