alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಬಾರಿ ಗರ್ಭಿಣಿಯಾದ ಶಿಲ್ಪಾ? ಸಹೋದರಿಗೆ ಸಿಕ್ಕಿದೆ ಮೆಸ್ಸೇಜ್…!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಗರ್ಭಿಣಿಯಂತೆ ಹೌದಾ? ಶಿಲ್ಪಾ ಶೆಟ್ಟಿ ಗರ್ಭಿಣಿ ಎಂಬ ವಿಷ್ಯವನ್ನು ಮೊದಲು ಸಹೋದರಿ ಶಮಿತಾ ಶೆಟ್ಟಿಗೆ ಹೇಳಿದ್ದಾರಂತೆ. ಹೀಗೊಂದು ಸುದ್ದಿ ನಿಮ್ಮ ಕಿವಿಗೂ ಬಿದ್ದಿದ್ದರೆ ಈಗ್ಲೇ ಸತ್ಯ ತಿಳಿದುಕೊಳ್ಳಿ.

ಶಿಲ್ಪಾ ಶೆಟ್ಟಿ ಗರ್ಭಿಣಿ ಎನ್ನುವ ಸುದ್ದಿ ಸುಳ್ಳು. ಶಿಲ್ಪಾ ಶೆಟ್ಟಿ ಎರಡನೇ ಬಾರಿ ಅಮ್ಮನಾಗ್ತಿಲ್ಲ. ನಿರ್ದೇಶಕ ಅನುರಾಗ್ ಬಸು ಮಾಡಿದ ತಮಾಷೆಯಿಂದ ಹೀಗೊಂದು ಸುದ್ದಿ ಹರಡಿದೆ.

ಸದ್ಯ ಅನುರಾಗ್ ಬಸು ಹಾಗೂ ಶಿಲ್ಪಾ, ಡಾನ್ಸರ್ -2 ಕಾರ್ಯಕ್ರಮವನ್ನು ಜಡ್ಜ್ ಮಾಡ್ತಿದ್ದಾರೆ. ಕಾರ್ಯಕ್ರಮದ ಬ್ರೇಕ್ ವೇಳೆ ಅನುರಾಗ್ ಬಸು ಶಿಲ್ಪಾ ಶೆಟ್ಟಿ ಫೋನ್ ಕದ್ದು ಶಮಿತಾಗೆ ಮೆಸ್ಸೇಜ್ ಕಳುಹಿಸಿದ್ದಾರೆ. ನಾನು ಗರ್ಭಿಣಿ ಅಂತಾ ಮೆಸ್ಸೇಜ್ ಕಳುಹಿಸಿದ್ದಾರೆ. ಇದನ್ನು ನೋಡಿ ಖುಷಿಯಾದ ಶಮಿತಾ, ಶಿಲ್ಪಾಗೆ ಫೋನ್ ಮಾಡಿದ್ದಾರೆ. ಅನೇಕ ಬಾರಿ ಮೆಸ್ಸೇಜ್ ಹಾಗೂ ಫೋನ್ ಮಾಡಿ ಶುಭ ಕೋರಿದ್ದಾರೆ. ಏನಾಗ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡ ಶಿಲ್ಪಾ, ಶಮಿತಾಗೆ ವಿವರಿಸುವುದ್ರಲ್ಲಿ ಸುಸ್ತಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...