alex Certify
ಕನ್ನಡ ದುನಿಯಾ       Mobile App
       

Kannada Duniya

ಶಿರಡಿ ಸಾಯಿಬಾಬಾ ಮಂದಿರಕ್ಕೆ ಇಷ್ಟೊಂದು ಬೆಲೆಯ ಕಿರೀಟ ನೀಡಿದ ಶಿಲ್ಪಾ

ಸೆಲೆಬ್ರಿಟಿಗಳು ದೇವಸ್ಥಾನಗಳಿಗೆ ಹೋಗುವುದು ಹೊಸತೇನಲ್ಲ. ತಮ್ಮ ಆಸೆ ಈಡೇರಿದಾಗ ಹರಕೆ ತೀರಿಸಲು ಸೆಲೆಬ್ರಿಟಿಗಳು ದೇವಸ್ಥಾನಕ್ಕೆ ಹೋಗ್ತಾರೆ. ನಟಿ ಶಿಲ್ಪಾಶೆಟ್ಟಿ ಕೂಡ ಇದಕ್ಕೆ ಹೊರತಾಗಿಲ್ಲ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ಸಹೋದರಿ ಶಮೀತಾ ಶೆಟ್ಟಿ ಜೊತೆ ಶಿರಡಿಗೆ ಭೇಟಿ ನೀಡಿದ್ದರು.

ಶಿಲ್ಪಾ ಶೆಟ್ಟಿ, ಶಿರಡಿ ಬಾಬಾ ದರ್ಶನ ಪಡೆಯುವ ಜೊತೆಗೆ ದೇವಸ್ಥಾನಕ್ಕೆ ದೊಡ್ಡ ದಾನ ನೀಡಿದ್ದಾರೆ. ಶಿಲ್ಪಾ 26 ಲಕ್ಷದ ಕಿರೀಟವನ್ನು ಶಿರಡಿ ಬಾಬಾಗೆ ಅರ್ಪಿಸಿದ್ದಾರೆ. 800 ಗ್ರಾಂನ ಈ ಕಿರೀಟ ತುಂಬಾ ಸುಂದರವಾಗಿದೆ. ಶಿರಡಿ ಬಾಬಾ ಪೂಜೆ ವೇಳೆ ಶಿಲ್ಪಾ ಶೆಟ್ಟಿ ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಈ ಬಟ್ಟೆಯಲ್ಲಿ ಶಿಲ್ಪಾ ತುಂಬಾ ಸುಂದರವಾಗಿ ಕಾಣ್ತಿದ್ದರು.

ಕಿರೀಟವನ್ನು ಬಾಬಾರಿಗೆ ನೀಡಿದ ಶಿಲ್ಪಾ ಸಂತೋಷ ವ್ಯಕ್ತಪಡಿಸಿದ್ದಾರೆ. ಬಾಬಾರಿಗೆ ನೀಡಿದ ಒಡವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ಶಿರಡಿಗೆ ಭೇಟಿ ನೀಡಿದ ಶಿಲ್ಪಾರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...