alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಶಿಲ್ಪಾ ಶೆಟ್ಟಿ ದಾಂಪತ್ಯದಲ್ಲಿ ಬಿರುಕು

Raj-Kundra-Shilpa-Shetty_3462016 ರ ಆರಂಭದಿಂದಲೂ ಬಾಲಿವುಡ್ ನಲ್ಲಿ ಬ್ರೇಕ್ ಅಪ್ ನದ್ದೇ ಸುದ್ದಿ. ವರ್ಷಗಟ್ಟಲೇ ಜೊತೆಯಾಗಿದ್ದ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಬೇರೆಯಾಗಿದ್ದಾರೆ. ಅರ್ಬಾಜ್ ಖಾನ್- ಮಲೈಕಾ ಆರೋರಾ ವಿಚ್ಚೇದನ ಪಡೆಯುವ ಸುಳಿವು ನೀಡಿದ್ದಾರೆ. ಈ ಮಧ್ಯೆ ಬಾಲಿವುಡ್ ನ ಸುಂದರ ಜೋಡಿ ಎಂದು ಹೇಳಲಾಗುತ್ತಿದ್ದ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಾಂಪತ್ಯ ಜೀವನ ಕುರಿತು ಅಪಸ್ವರ ಕೇಳಿ ಬಂದಿದೆ.

ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸ್ವತಃ ರಾಜ್ ಕುಂದ್ರಾ ಈ ಕುರಿತು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ರಾಜ್ ಕುಂದ್ರಾ ಕುಟುಂಬವನ್ನು ನಿರ್ಲಕ್ಷಿಸಿ ಉದ್ಯಮಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆಂಬುದೇ ವೈಮನಸ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಈ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜ್ ಕುಂದ್ರಾ, ಶಿಲ್ಪಾ ತನ್ನ ಗೆಳತಿಯರ ಬಳಿ ಈ ಕುರಿತು ಹೇಳಿಕೊಂಡಿದ್ದೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಲು ಕಾರಣವಾಗಿದೆ. ಮಾತುಂಗಾದಲ್ಲಿರುವ ನನ್ನ ಕಛೇರಿಯಲ್ಲಿ ಉದ್ಯಮದ ಸಲುವಾಗಿ ದಿನದ 20 ಗಂಟೆ ಕಳೆಯುವಂತಾಗಿದೆ. ಹಾಗಾಗಿ ಕುಟುಂಬದ ಕುರಿತು ಹೆಚ್ಚು ಗಮನ ಹರಿಸಲಾಗಿಲ್ಲ. ಆದರೆ ಈ ಕಾರಣಕ್ಕಾಗಿಯೇ ತಾವಿಬ್ಬರು ಬೇರೆಯಾಗುವುದಿಲ್ಲ. ಕಳೆದ ವರ್ಷ ಶಿಲ್ಪಾ, ಹುಟ್ಟು ಹಬ್ಬವನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಆಚರಿಸಲಾಗಿತ್ತು. ಆದರೆ ಈ ಬಾರಿ ಜೂನ್ 8 ರಂದು ನಡೆಯಲಿರುವ ಶಿಲ್ಪಾರ 41 ನೇ ಹುಟ್ಟು ಹಬ್ಬದ ಸಂಭ್ರಮವನ್ನು ಪತ್ನಿ ಹಾಗೂ ಪುತ್ರನ ಜೊತೆ ಆಚರಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...