alex Certify
ಕನ್ನಡ ದುನಿಯಾ       Mobile App
       

Kannada Duniya

ನಿಯಮ ಉಲ್ಲಂಘಿಸಿದ್ದ ನಟನನ್ನೂ ಬಿಡಲಿಲ್ಲ BMC

ಮುಂಬೈನ ಜುಹುನಲ್ಲಿರುವ ಬಿಜೆಪಿ ಸಂಸದ ಹಾಗೂ ನಟ ಶತ್ರುಘ್ನ ಸಿನ್ಹಾ ಅವರ 8 ಮಹಡಿ ಕಟ್ಟಡದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಕೆಲ ಭಾಗಗಳನ್ನು ಕೆಡವಿ ಹಾಕಲಾಗಿದೆ. ಅನುಮತಿಯಿಲ್ಲದೇ ಸಿನ್ಹಾ ಈ ವಿಸ್ತರಣೆ ಮಾಡಿದ್ದರು. ಸಿನ್ಹಾ ತಮ್ಮ ಮನೆ ರಾಮಾಯಣ್ ಅನ್ನು ಕಳೆದ ಕೆಲ ತಿಂಗಳುಗಳಲ್ಲಿ ಅಕ್ರಮವಾಗಿ ವಿಸ್ತರಣೆ ಮಾಡಿರುವ ಬಗ್ಗೆ ಬಿಎಂಸಿಗೆ ಹಲವಾರು ದೂರುಗಳು ಬಂದಿದ್ದವು.

ಈ ಬಗ್ಗೆ ಬೃಹನ್ ಮುಂಬೈ ಪಾಲಿಕೆ ಅವರಿಗೆ ನೋಟಿಸ್ ಕೂಡ ನೀಡಿತ್ತು. ನೋಟಿಸ್ ಗೆ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ. ಆದ್ರೆ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಪಾಲಿಕೆ ನಿಯಮಗಳನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪಾಲಿಕೆ ಅಧಿಕಾರಿಗಳು ಕಳೆದ ವಾರ ಮತ್ತೊಂದು ನೋಟಿಸ್ ನೀಡಿದ್ದರು.

ನಿನ್ನೆ ಅಕ್ರಮವಾಗಿ ಕಟ್ಟಿದ್ದ ಭಾಗವನ್ನು ತೆರವು ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ತೆರವು ಕಾರ್ಯ ನಡೆಸುತ್ತಿದ್ದಾಗ ಸಿನ್ಹಾ ಕೂಡ ಮನೆಯಲ್ಲೇ ಇದ್ರು. ಎರಡು ಶೌಚಾಲಯ, ಒಂದು ಪ್ಯಾಂಟ್ರಿ, ಕಚೇರಿ ಮತ್ತು ಪೂಜಾ ಕೋಣೆಯನ್ನು ಅಕ್ರಮವಾಗಿ ಕಟ್ಟಲಾಗಿತ್ತು. ಅದನ್ನೆಲ್ಲ ಕೆಡವಿ ಹಾಕಲಾಗಿದ್ದು, ಸಿನ್ಹಾ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...