alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯನ್ನು ಕಿಚಾಯಿಸಿದ್ದಕ್ಕೆ ಸಿಡಿಮಿಡಿಗೊಂಡ್ಲು ನಟಿ

ಭಾರತದ ಹೆಸರಾಂತ ನಟ ಶತ್ರುಘ್ನ ಸಿನ್ಹಾ, ಹಾಸ್ಯ ಕಲಾವಿದ ಕಪಿಲ್ ಶರ್ಮಾ ವಿರುದ್ಧ ಹರಿಹಾಯ್ದಿದ್ದಾರೆ. ಇಷ್ಟು ದಿನಗಳ ಕಾಲ ಕಪಿಲ್ ಮಾಡುತ್ತಿದ್ದ ತರಲೆಯನ್ನು ನೋಡಿ ಸುಮ್ಮನಿದ್ದ ಶತ್ರುಘ್ನ ಸಿನ್ಹಾ ಕೊನೆಗೂ ಮೌನ ಮುರಿದಿದ್ದಾರೆ.

ಮಿಮಿಕ್ರಿ ಸಹ ಒಂದು ಕಲೆ….ಅದಕ್ಕೂ ತನ್ನದೇ ಆದ ಚೌಕಟ್ಟು ಇರುತ್ತದೆ. ತನ್ನ ಪರಿಧಿಯ ಒಳಗೆ ಬೇರೆ ನಟನನ್ನು ಅನುಕರಣೆ ಮಾಡಿದ್ರೆ, ಶ್ಲಾಘನೆ. ಆದ್ರೆ, ಕೆಲವೊಮ್ಮೆ ಉತ್ಸಾಹದಲ್ಲಿ ಏನೋ ಮಾಡಲು ಹೋಗಿ ಏನೋ ಮಾಡಿ ಬಿಡುತ್ತೇವೆ. ಕಪಿಲ್ ಶರ್ಮಾಗೂ ಇದೇ ರೀತಿ ಆಗಿದೆ. ಕಪಿಲ್ ಶರ್ಮಾ ತಮ್ಮ ಶೋಗಳಲ್ಲಿ ಶತ್ರುಘ್ನ ಸಿನ್ಹಾರ ಹಾವ, ಭಾವದಿಂದ ಎಲ್ಲರ ಮನ ಗೆದ್ದಿದ್ದಾರೆ. ಅಲ್ಲದೆ ಕೆಲವೊಮ್ಮೆ ಅವರ ರೀತಿ ಡೈಲಾಗ್ ಹೇಳಿ ರಂಜಿಸಿದ್ದಾರೆ. ಆದ್ರೆ, ಅನುಕರಣೆ ಮಾಡುವ ಚೌಕಟ್ಟನ್ನೂ ಮೀರಿ ನಡೆದಿದ್ದು, ತನಗೆ ನೋವು ತಂದಿದೆ ಎಂದು ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

ಕಪಿಲ್ ಶೋ ವೇಳೆ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ, ತಂದೆಯ ನಕಲು ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದ್ರೆ, ಇದಕ್ಕೆಲ್ಲಾ ಸೊಪ್ಪು ಹಾಕದ ಕಪಿಲ್ ಹಳೆ ಚಾಳಿ ಮುಂದುವರೆಸಿದ್ದು, ನಟನ ಸಿಟ್ಟು ನೆತ್ತಿಗೆ ಏರುವಂತೆ ಮಾಡಿದೆ.

ಶತ್ರುಘ್ನ ಸಿನ್ಹಾ ಹೇಳುವಂತೆ ಲತಾ ಮಂಗೇಶ್ಕರ್, ಅಮಿತಾಬ್ ಬಚ್ಚನ್ ರ ಅನುಕರಣೆಯನ್ನು ಅಭಿಮಾನಿಗಳು ಮಾಡುತ್ತಾರೆ. ತಮ್ಮ ಹಾವ ಭಾವಗಳನ್ನು ನೋಡಿ ಸ್ಟಾರ್ ಗಳೂ ಮಜಾ ಪಡೆಯುತ್ತಾರೆ. ಆದ್ರೆ, ಅನುಕರಣೆ ಒಂದು ಚೌಕಟ್ಟಿನಲ್ಲಿರಬೇಕು ಎಂಬುದನ್ನು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...