alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೂಕ್ ವ್ಯಾನಿಟಿ ವ್ಯಾನ್ ವಿಶೇಷತೆಗಳೇನು ಗೊತ್ತಾ…?

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರಿಗೆ ದುಬಾರಿ ವೆಚ್ಛದ ಐಷಾರಾಮಿ ಕಾರುಗಳೆಂದರೆ ಸಖತ್ ಕ್ರೇಜ್. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಅವುಗಳಲ್ಲಿ ಜಾಲಿ ರೈಡ್ ಹೋಗುವುದೆಂದರೆ ಖುಷಿಯೋ ಖುಷಿ. ಅವರಲ್ಲಿರುವ ದುಬಾರಿ ವಾಹನಗಳ ಸಾಲಿಗೆ ಹೊಸದರ ಸೇರ್ಪಡೆಯಾಗುತ್ತಲೇ ಇರುತ್ತದೆ. 

ಅಂದ ಹಾಗೇ ಶೂಟಿಂಗ್ ಸ್ಥಳಕ್ಕೆ ಕೊಂಡೊಯ್ಯಲು ಅತ್ಯಾಧುನಿಕ ಸೌಲಭ್ಯವುಳ್ಳ ವ್ಯಾನಿಟಿ ವ್ಯಾನ್ ಒಂದು ಶಾರೂಕ್ ಖಾನ್ ರ ಬಳಿ ಇದೆ. ಕ್ಯಾರಾವಾನ್ ನಲ್ಲಿ ಇರುವ ಸೌಲಭ್ಯಗಳಿಗಿಂತ ಅತಿ ಹೆಚ್ಚು ಸೌಕರ್ಯ ಹಾಗೂ ಅತ್ಯಾಧುನಿಕ ಮಾದರಿಯ ವಿನ್ಯಾಸದ ವಿಶೇಷ ವ್ಯಾನಿಟಿ ವ್ಯಾನ್ ಇದಾಗಿದೆ.

ಶಾರುಕ್ ಗಾಗಿಯೇ ರೆಡಿಯಾಗಿರುವ ಈ ಅತ್ಯಾಧುನಿಕ ವ್ಯಾನ್ ಸಿದ್ಧಪಡಿಸಿದವರು ಪ್ರಖ್ಯಾತ ವಾಹನ ವಿನ್ಯಾಸಕಾರ ದಿಲೀಪ್ ಛಬ್ರಿಯಾ. ಈ ವ್ಯಾನ್ ಅನ್ನು ಶಾರುಕ್ ಅಗತ್ಯಕ್ಕೆ ತಕ್ಕಂತೆ ಮರು ವಿನ್ಯಾಸಗೊಳಿಸಿ ಸಿದ್ಧಪಡಿಸಲು 3 ತಿಂಗಳು ತೆಗೆದುಕೊಂಡಿದ್ದಾರೆ.

ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಅತ್ಯಾಧುನಿಕ ವಿಶ್ರಾಂತಿ ಕೊಠಡಿ, ವೈಫೈ, ಟಾಯ್ಲೆಟ್, ಕಿಚನ್, ಸೆಟಲೈಟ್ ಟಿವಿ ಸೇರಿದಂತೆ ಸಕಲ ಸೌಲಭ್ಯಗಳಿವೆ. ಅಲ್ಲದೇ ಪ್ರತ್ಯೇಕ ಮೇಕಪ್ ರೂಮ್ ಕೂಡಾ ಇದರಲ್ಲಿದೆ.

ಹೊರಾಂಗಣ ಚಿತ್ರೀಕರಣವಿದ್ದಾಗ ಬಿಡುವಿನ ವೇಳೆಯಲ್ಲಿ ಶಾರೂಕ್ ಖಾನ್ ಇದರಲ್ಲೇ ವಿಶ್ರಾಂತಿ ಪಡೆಯುತ್ತಾರೆ. ತಮ್ಮ ವ್ಯಾನಿಟಿ ವ್ಯಾನ್ ನಿಲ್ಲಿಸಲೆಂದೇ ಶಾರೂಕ್ ಖಾನ್ ತಮ್ಮ ನಿವಾಸ ‘ಮನ್ನತ್’ ನಲ್ಲಿ ಅನಧಿಕೃತವಾಗಿ ಪಾರ್ಕಿಂಗ್ ಕಟ್ಟಿಸಿದ್ದಾರೆಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಬೃಹನ್ಮುಂಬಯಿ ಕಾರ್ಪೋರೇಷನ್ ಅಧಿಕಾರಿಗಳು ಅದನ್ನು ತೆರವುಗೊಳಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...