alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತಾಬ್, ಸಲ್ಮಾನ್ ಹಿಂದಿಕ್ಕಿದ ಶಾರುಖ್

shahrukh-dilwale

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಮತ್ತೆ ಸಲ್ಮಾನ್, ಅಮಿತಾಬ್ ಬಚ್ಚನ್ ರನ್ನು ಹಿಂದಿಕ್ಕಿದ್ದಾರೆ. ಟೈಮ್ Selebeks ವೆಬ್ಸೈಟ್ ಸಮೀಕ್ಷೆಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕಾಜೋಲ್ ಅತ್ಯುತ್ತಮ ನಟಿ ಪ್ರಶಸ್ತಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

ವೆಬ್ಸೈಟ್ ಅನುಸಾರ ಸಲ್ಮಾನ್ ಖಾನ್, ರಣವೀರ್ ಸಿಂಗ್, ವರುಣ್ ಧವನ್ ಮತ್ತು ಅಮಿತಾಬ್ ಬಚ್ಚನ್ ಹಿಂದಿಕ್ಕಿ ಶಾರುಖ್ ಖಾನ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರಂತೆ. ಡಿಸೆಂಬರ್ ನಲ್ಲಿ ನಡೆಸಿದ ಸರ್ವೆಯಲ್ಲಿ ಶಾರುಖ್ 42 ಅಂಕ ಗಳಿಸಿದ್ರೆ, ಸಲ್ಮಾನ್ ಖಾನ್ 36, ರಣವೀರ್ ಸಿಂಗ್ 30, ವರುಣ್ ಧವನ್ 27.5 ಮತ್ತು ಬಚ್ಚನ್ 23 ಅಂಕ ಗಳಿಸಿದ್ದಾರಂತೆ.

ನಟಿಯರಲ್ಲಿ ಕಾಜೋಲ್ ಮೊದಲ ಸ್ಥಾನ ಪಡೆದಿದ್ದಾರೆ. ಅವರಿಗೆ 36.5 ಅಂಕ ಸಿಕ್ಕಿದೆಯಂತೆ. ನಂತರ ಪ್ರಿಯಾಂಕ ಚೋಪ್ರಾ 35, ದೀಪಿಕಾ ಪಡುಕೋಣೆ 34, ಯಾಮಿ ಗೌತಮಿ 22 ಹಾಗೂ ಕರೀನಾ ಕಪೂರ್ 18.5 ಅಂಕ ಪಡೆದಿದ್ದಾರೆ.

ಬಾಕ್ಸ್ ಆಫೀಸ್ ಯಶಸ್ಸು, ಸುದ್ದಿ, ಜಾಹೀರಾತು, ಸಾಮಾಜಿಕ ಜಾಲತಾಣದಲ್ಲಿ ಅವರ ಪಾಲ್ಗೊಳ್ಳುವಿಕೆ ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ರೇಟಿಂಗ್ ಸಿದ್ಧಪಡಿಸಿದೆ ಟೈಮ್ Selebeks ವೆಬ್ಸೈಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...