alex Certify
ಕನ್ನಡ ದುನಿಯಾ       Mobile App
       

Kannada Duniya

ಬಾದ್ ಶಾ ಶಾರುಕ್ ಗೆ ಶುರುವಾಗಿದೆ ಸಂಕಷ್ಟ

2017_2largeimg14_tuesday_2017_195458417ಬಾಲಿವುಡ್ ಬಾದ್ ಶಾ ಶಾರುಕ್ ಖಾನ್, ಕೋರ್ಟ್ ಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಶಾರುಖ್ ವಿರುದ್ಧ ಕೋಟ ಜಿ ಆರ್ ಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ರಾಯಿಸ್’ ಚಿತ್ರದ ಪ್ರಚಾರದ ವೇಳೆ ನಡೆದ ಯುವಕನ ಸಾವು ಹಾಗೂ ಗಲಭೆ ಸಂಬಂಧ ಕೋರ್ಟ್ ಸೂಚನೆ ಮೇರೆಗೆ ದೂರು ದಾಖಲಿಸಲಾಗಿದೆ.

‘ರಾಯಿಸ್’ ಚಿತ್ರದ ಪ್ರಮೋಷನ್ ಗಾಗಿ ಶಾರುಕ್ ಖಾನ್ ಮುಂಬೈನಿಂದ ದೆಹಲಿಯವರೆಗೆ ರೈಲ್ವೆ ಪ್ರಯಾಣ ಬೆಳೆಸಿದ್ದರು. ರೈಲ್ವೆ ನಿಲ್ದಾಣಗಳಲ್ಲಿ ಇಳಿದು ಅಭಿಮಾನಿಗಳ ಜೊತೆ ಮಾತನಾಡಿ ಶಾರುಕ್ ಮುಂದೆ ಸಾಗ್ತಾ ಇದ್ದರು. ಕೋಟ ರೈಲ್ವೆ ನಿಲ್ದಾಣದಲ್ಲಿ ಕೂಡ ಶಾರುಕ್ ಇಳಿದಿದ್ದಾರೆ. ಅಲ್ಲಿ 10 ನಿಮಿಷ ನಿಂತಿದ್ದ ಶಾರುಕ್ ಅಭಿಮಾನಿಗಳಿಗೆ ‘ರಾಯಿಸ್’ ಚಿತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ಎಸೆದಿದ್ದಾರೆ.

ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರಿಂದ ಗಲಾಟೆ ಶುರುವಾಗಿತ್ತು. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಆಹಾರ ಮಾರಾಟ ಮಾಡ್ತಿದ್ದ ವ್ಯಕ್ತಿಯೊಬ್ಬರ ತಳ್ಳುಗಾಡಿ ನೆಲಕ್ಕುರುಳಿ ನಷ್ಟವಾಗಿತ್ತು. ವಿಕ್ರಮ್ ಸಿಂಗ್ ಎಸಿಜಿಎಂ ರೈಲ್ವೆ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ಶಾರುಖ್ ಖಾನ್ ವಿರುದ್ಧ ಗಲಭೆ ಹಾಗೂ ರೈಲ್ವೆ ಆಸ್ತಿನಷ್ಟದ ಕೇಸ್ ದಾಖಲಿಸಿ ಆದಷ್ಟು ಬೇಗ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...