alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ರಾಮ್ ನನ್ನು ಗೌರಿ ಖಾನ್ ರಿಂದ ದೂರ ಇಡ್ತಿದ್ದಾರೆ ಶಾರುಖ್..?

abram

ಬಾಲಿವುಡ್ ಬಾದ್ ಶಾ ಶಾರುಖ್ ಕೊನೆ ಮಗ ಅಬ್ರಾಮ್ ಬಗ್ಗೆ ಅನೇಕ ಕುತೂಹಲಗಳಿವೆ. ಹುಟ್ಟುವಾಗಲೇ ಚರ್ಚೆಗೆ ಕಾರಣವಾಗಿದ್ದ ಅಬ್ರಾಮ್ ಅಂದ್ರೆ ಶಾರುಖ್ ಗೆ ಬಹಳ ಪ್ರೀತಿ. ಇದೇ ಕಾರಣಕ್ಕೆ ಶಾರುಖ್ ಮಗನನ್ನು ತಾಯಿ ಗೌರಿಯಿಂದ ದೂರ ಮಾಡ್ತಿದ್ದಾರೆಂಬ ಸುದ್ದಿ ಬಂದಿದೆ.

ಅಬ್ರಾಮ್ ಹುಟ್ಟಿದ ವೇಳೆ ಶಾರುಖ್ ಸುದ್ದಿಯನ್ನು ಮರೆಮಾಚಲು ಯತ್ನಿಸಿದ್ದರು. ಒಂದುವರೆ ವರ್ಷಗಳವರೆಗೆ ಎಲ್ಲಿಯೂ ಶಾರುಖ್ ತನ್ನ ಮಗನ ಬಗ್ಗೆ ಹೇಳಿರಲಿಲ್ಲ. ಮಗನ ಇರುವಿಕೆಯನ್ನು ಮುಚ್ಚಿಟ್ಟಿದ್ದ ಶಾರುಖ್ ಜೈಲಿಗೆ ಹೋಗ್ತಾರೆ ಎನ್ನುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ವಾಸ್ತವವಾಗಿ ಅಬ್ರಾಮ್, ಗೌರಿ ಹಾಗೂ ಶಾರುಖ್ ಮಗನಲ್ಲ. ಅಬ್ರಾಮ್, ಗೌರಿ ಖಾನ್ ಸಹೋದರಿ ನಮಿತಾ ಹಾಗೂ ಶಾರುಖ್ ಮಗ. ಬಾಡಿಗೆ ತಾಯಿಯ ಸಹಾಯದಿಂದ ಅಬ್ರಾಮ್ ನನ್ನು ಪಡೆಯಲಾಗಿದೆ. ಆದ್ರೆ ಸಮಾಜಕ್ಕೆ ಹೆದರಿ ಈ ವಿಷಯವನ್ನು ಶಾರುಖ್ ಮುಚ್ಚಿಟ್ಟಿದ್ದರಂತೆ.

ಈಗ ಬಂದಿರುವ ಸುದ್ದಿ ಪ್ರಕಾರ ಶಾರುಖ್, ಅಬ್ರಾಮ್ ನನ್ನು ಗೌರಿಯಿಂದ ದೂರ ಮಾಡ್ತಿದ್ದಾರಂತೆ. ಶಾರುಖ್ ಗೆ ಅಬ್ರಾಮ್ ಬಗ್ಗೆ ಸಿಕ್ಕಾಪಟ್ಟೆ ಪ್ರೀತಿ ಇರುವ ಕಾರಣ ಹೀಗೆ ಮಾಡ್ತಿದ್ದಾರಂತೆ. ತಮ್ಮ ಮುಂದಿನ ದಿನಗಳ ಪ್ರತಿ ಕ್ಷಣವನ್ನು ಅಬ್ರಾಮ್ ಜೊತೆ ಕಳೆಯಲು ಶಾರುಖ್ ಇಷ್ಟಪಡ್ತಾರಂತೆ. ಎಲ್ಲ ಚಿತ್ರಗಳ ಶೂಟಿಂಗ್ ಗೆ ಅಬ್ರಾಮ್ ಜೊತೆ ಬರ್ತಿದ್ದಾರಂತೆ ಶಾರುಖ್. ಶೂಟಿಂಗ್ ನಲ್ಲಿ ಬಿಡುವು ಸಿಕ್ಕಾಗೆಲ್ಲ ಮಗನ ಜೊತೆ ಮಾತನಾಡುತ್ತ ಸಮಯ ಕಳೆಯುತ್ತಾರಂತೆ.

ಮತ್ತಿಬ್ಬರು ಮಕ್ಕಳು ದೊಡ್ಡವರಾಗಿದ್ದು, ಅವರು ಸ್ಕೂಲ್, ಫ್ರೆಂಡ್ಸ್ ಅಂತಾ ಹೊರಗೆ ಇರೋದ್ರಿಂದ ಮನೆಯಲ್ಲಿ ಶಾರುಖ್ ಪತ್ನಿ ಗೌರಿ ಮಾತ್ರ ಇರ್ತಾರಂತೆ. ಮೊದಲು ಗೌರಿಗೆ ಅಬ್ರಾಮ್ ಜೊತೆಯಾಗಿದ್ದ. ಆದ್ರೆ ಆತನನ್ನು ಶಾರುಖ್ ತನ್ನ ಜೊತೆ ಕರೆದೊಯ್ಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...