alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಖಾನ್ ಬಗ್ಗೆ ಎಕ್ಸ್ ಕ್ಲೂಸಿವ್ ಡಿಟೇಲ್ಸ್….

sharukhಶಾರುಕ್ ಖಾನ್ ಒಬ್ಬ ಸೂಪರ್ ಸ್ಟಾರ್, ಪ್ರೀತಿಯ ತಂದೆ, ಜ್ಞಾನದ ಅನ್ವೇಷಿ, ಒಬ್ಬ ಸಜ್ಜನ ಅನ್ನೋದು ನಮಗೆಲ್ಲಾ ಗೊತ್ತು. ಶಾರುಕ್ ಬದುಕು ತೆರೆದ ಪುಸ್ತಕದಂತೆ, ಅವರ ವೈಯಕ್ತಿಕ ಹಾಗೂ ವೃತ್ತಿಪರ ಬದುಕು ಅಭಿಮಾನಿಗಳಿಗೆ ಮುಕ್ತ ಮುಕ್ತ.

ಆದ್ರೆ ಖಾಸಗಿ ಬದುಕಿನಲ್ಲಿ ಕಿಂಗ್ ಖಾನ್ ಹೇಗಿರ್ತಾರೆ ಅನ್ನೋದು ಅವರ ಸುತ್ತ ಮುತ್ತ ಕೆಲಸ ಮಾಡುವವರಿಗೆ ಮಾತ್ರ ಗೊತ್ತು. ಸರಳ ಹಾಗೂ ಹಾಸ್ಯ ಪ್ರವೃತ್ತಿಯುಳ್ಳ ಈ ನಟ ಎಲ್ಲಿಗೆ ಹೋದ್ರೂ ಜನರ ಮನ ಗೆಲ್ತಾರೆ. ರೀಲ್ ನಿಂದ ರಿಯಲ್ ಬದುಕಿಗೆ ಬಂದಾಗ ಶಾರುಕ್ ಹೇಗಿರ್ತಾರೆ ಅನ್ನೋದನ್ನು ಅವರ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ದ ಮಾಜಿ ಉದ್ಯೋಗಿಯೊಬ್ಬರು ಕೆಲ ವರ್ಷಗಳ ಹಿಂದೆ ಇದನ್ನು ಬಿಚ್ಚಿಟ್ಟಿದ್ದಾರೆ.

ಅದನ್ನು ಅವರ ಮಾತಿನಲ್ಲೇ ಕೇಳೋಣ. ”ನಾನು ಅವರ ಮನೆಯಲ್ಲಿರುವ ಕಚೇರಿಯಲ್ಲಿ ಕೆಲಸ ಮಾಡಿದ್ದೇನೆ ಅವರೊಬ್ಬ ಜಂಟಲ್ ಮ್ಯಾನ್. ನನ್ನಂತಹ ಸಾಧಾರಣ ಮಹಿಳಾ ಉದ್ಯೋಗಿಗೂ ಕೆಲಸ ಕೊಡುವಂತಹ ಔದಾರ್ಯ ಅವರಲ್ಲಿದೆ. ಅಭಿಮಾನಿಗಳಿಗೆ ಪ್ರೀತಿ ತೋರಿಸೋದನ್ನು ಅವರು ಮರೆಯುವುದಿಲ್ಲ. ಬೆಳಗ್ಗೆ ಕಾರ್ ಏರಿ ಹೊರಡುತ್ತಿದ್ದಂತೆ ಗೇಟ್ ಬಳಿ ಅಭಿಮಾನಿಗಳು ಕಾಯುತ್ತಿರುತ್ತಾರೆಂಬುದು ಶಾರುಕ್ ಗೆ ಗೊತ್ತು. ಅವರ ಕಣ್ತಪ್ಪಿಸಿ ಹೋಗುವ ಪ್ರಯತ್ನ ಮಾಡುವುದಿಲ್ಲ, ಅವರತ್ತ ಕೈಬೀಸುತ್ತಾರೆ.”

”ದಾನ ಧರ್ಮ ಮಾಡುವುದರಲ್ಲಿ ಅವರದ್ದು ಎತ್ತಿದ ಕೈ. ಅದನ್ನು ಮಾಧ್ಯಮಗಳೆದುರು ಬಹಿರಂಗಪಡಿಸುವುದಿಲ್ಲ. ಮನೆಯವರ ಜೊತೆ ಕಾಲ ಕಳೆಯಲು ಅವರು ಇಷ್ಟಪಡುತ್ತಾರೆ. ಮಕ್ಕಳು ಮನೆಯಲ್ಲಿದ್ದಾಗ ಅವರೊಂದಿಗಿರುತ್ತಾರೆ. ಶಾರುಕ್ ಭೋಜನ ಪ್ರಿಯರು. ಛೋಲೆ ಬಟೂರೆ ಅಂದ್ರೆ ಪಂಚಪ್ರಾಣ. ನಾನು ತಂದಿದ್ದರಲ್ಲಿ ಪಾಲು ಕೊಡುವಂತೆ ಕೇಳಿದ ಸರಳ ಮನುಷ್ಯ ಅವರು. ನನ್ನ ಜೊತೆ ಊಟಕ್ಕೆ ಕುಳಿತು ಛೋಲೆ ಬಟುರೆಯನ್ನು ತಿಂದಿದ್ದರು. ಒಮ್ಮೆ ಆಕಸ್ಮಿಕವಾಗಿ ಶಾರುಕ್ ರ 11 ಲಕ್ಷ ಬೆಲೆಬಾಳುವ ಜಾಕೆಟ್ ಮೇಲೆ ನನ್ನ ಪೆನ್ನಿನ ಗುರುತು ಮೂಡಿತ್ತು, ಅದಕ್ಕಾಗಿ ನನ್ನನ್ನು ಶಿಕ್ಷಿಸುವುದು ಹಾಗಿರಲಿ, ಶಾರುಕ್ ಇಟ್ಸ್ ಓಕೆ ಅಂತಾ ನನ್ನ ತಲೆ ನೇವರಿಸಿದ್ರು.”

”ಶಾರುಕ್ ತುಂಬಾ ಹಾಸ್ಯ ಪ್ರವೃತ್ತಿಯುಳ್ಳವರು. ನಟ ಆಗದೇ ಇದ್ದಲ್ಲಿ ಖಂಡಿತಾ ಅವರೊಬ್ಬ ಕಾಮಿಡಿಯನ್ ಆಗಿರುತ್ತಿದ್ದರು. ಅವರು ಕೋಪಿಷ್ಠರಲ್ಲ. ಶಾರುಕ್ ಒಬ್ಬ ಪರಿಶ್ರಮಿ, ಭಾರತದಲ್ಲಿರುವುದು ಕಡಿಮೆಯಾದ್ರೂ ಇಲ್ಲಿನ ಎಲ್ಲಾ ವಿಚಾರ ತಿಳಿದುಕೊಂಡಿರ್ತಾರೆ, ಹಗಲು- ರಾತ್ರಿ ಕೆಲಸ ಮಾಡ್ತಾರೆ. ಪ್ರತಿದಿನ 3 ದಿನಪತ್ರಿಕೆಗಳನ್ನು ಓದುತ್ತಾರೆ, ಜೀವನ ಚರಿತ್ರೆ, ಕವನಗಳನ್ನು ಓದುವ ಹವ್ಯಾಸ ಅವರಿಗಿದೆ. ಬಾಲ್ಯ ಸ್ನೇಹಿತರೆಲ್ಲ ಅವರಿಗೆ ಈಗಲೂ ಮನೆಯವರಿದ್ದಂತೆ. ಆದ್ರೆ ಎಲ್ಲದರಲ್ಲೂ ಅವರು ಲೇಟ್, ನಸುಕಿನಲ್ಲೇ ಎದ್ರೂ ಲೇಟಾಗಿ ತಲುಪುತ್ತಾರೆ. ಒಂದು ವರ್ಷ ಶಾರುಕ್ ಜೊತೆ ಕೆಲಸ ಮಾಡಿರುವ ನಾನು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅವರು ಕೊಡಿಸಿದ ಟ್ರೀಟ್, ನನ್ನ ಮೇಲಿಟ್ಟ ವಿಶ್ವಾಸ ಸದಾ ನೆನಪಿನಲ್ಲುಳಿಯಲಿದೆ. ನನಗೆ ಸಿಕ್ಕಿದ ಬೆಸ್ಟ್ ಬಾಸ್ ಅಂದ್ರೆ ಶಾರುಕ್ ಖಾನ್.’’

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...