alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಕ್ ಖಾನ್ ದುಬೈ ಮನೆ ಹೇಗಿದೆ ಗೊತ್ತಾ….?

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರು ಏನು ಮಾಡಿದರೂ ಸುದ್ದಿಯೇ. ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ಅವರ ಐಷಾರಾಮಿ ಬಂಗಲೆ, ವ್ಯಾನಿಟಿ ವ್ಯಾನ್ ಕುರಿತಂತೆ ಅಭಿಮಾನಿಗಳಿಗೆ ಸಹಜವಾಗಿಯೇ ಕುತೂಹಲ ಇದ್ದೇ ಇರುತ್ತದೆ. ಶಾರುಕ್ ಖಾನ್ ದುಬೈನಲ್ಲಿಯೂ ಮನೆ ಹೊಂದಿದ್ದಾರೆ.

ಅದನ್ನು ಮನೆ ಎನ್ನುವುದಕ್ಕಿಂತ ಅರಮನೆ ಎಂದೇ ಕರೆಯುವುದೊಳಿತು. ಆಧುನಿಕ ಅರಮನೆ ಇದಾಗಿದ್ದು, ಸಕಲ ಸೌಲಭ್ಯಗಳನ್ನು ಒಳಗೊಂಡಿದೆ. ಮುಂಬೈನ ಪ್ರತಿಷ್ಠಿತ ಏರಿಯಾ ಬಾಂದ್ರಾದಲ್ಲಿರುವ ಶಾರುಕ್ ಬಂಗಲೆಮನ್ನತ್ನಲ್ಲಿಯೂ ಐಷಾರಾಮಿ ಸೌಲಭ್ಯಗಳಿದ್ದು, ಅದಕ್ಕಿಂತ ಹೆಚ್ಚಿನ ಸೌಲಭ್ಯಗಳು ದುಬೈ ಮನೆಯಲ್ಲಿವೆ.

ದುಬೈನ ಕೃತಕ ದ್ವೀಪ ತಾಳೆಗರಿ ಆಕಾರದಲ್ಲಿರುವಪಾಮ್ ಜುಮೈರಾದಲ್ಲಿ ಶಾರುಕ್ ಖಾನ್ ಬೃಹತ್ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಇಲ್ಲಿಯೇ ಕಳೆದ 3 ವರ್ಷಗಳಿಂದ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಹೊಸ ವರ್ಷ ಆಚರಿಸುತ್ತಿದ್ದಾರೆ.

14 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಮನೆಯಲ್ಲಿ ಎರಡು ರಿಮೋಟ್ ಕಂಟ್ರೋಲ್ ಗ್ಯಾರೇಜ್ ಗಳಿವೆ. ಬೀಚ್ ಗೆ ಹೋಗಲು ಪ್ರತ್ಯೇಕ ಮಾರ್ಗವಿದೆ. ಇದರ ಮೌಲ್ಯ 17 ಕೋಟಿ ರೂ. ಗೂ ಅಧಿಕ ಎನ್ನಲಾಗಿದ್ದರೂ ಅದಕ್ಕಿಂತ ಜಾಸ್ತಿ ಬೆಲೆಯ ಒಳಾಂಗಣ ವಿನ್ಯಾಸಕ್ಕೆ ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಲಕ್ಸುರಿ ಸೌಲಭ್ಯದ ಮನೆಗೆ ಶಾರುಕ್ ಆಗಾಗ ಭೇಟಿ ನೀಡುತ್ತಾರೆ. ಹೊಸ ವರ್ಷವನ್ನು ಕುಟುಂಬದೊಂದಿಗೆ ಇಲ್ಲಿಯೇ ಆಚರಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...