alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ಪಾಲಿಕೆಗೆ ದಂಡ ಕಟ್ಟಿದ ಶಾರುಖ್

mannat3

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುವ ನಟ. ಅವರು ಏನು ಮಾಡಿದರೂ ಸುದ್ದಿಯೇ. ಇಂತಹ ಶಾರುಖ್ ಖಾನ್ ಈಗ ದಂಡದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹೌದು, ಶಾರುಖ್ ಅವರಿಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ ದಂಡ ವಿಧಿಸಿದೆ.

ಮುಂಬೈನಲ್ಲಿರುವ ಶಾರುಖ್ ಖಾನ್ ನಿವಾಸ ‘ಮನ್ನತ್’ನಲ್ಲಿ ಮಹಾನಗರ ಪಾಲಿಕೆಯ ಅನುಮತಿ ಪಡೆಯದೇ ಅಕ್ರಮವಾಗಿ ರ್ಯಾಂಪ್ ನಿರ್ಮಾಣ ಮಾಡಲಾಗಿದ್ದು, ಇದಕ್ಕಾಗಿ ಅವರಿಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆಯಿಂದ ಬರೋಬ್ಬರಿ 1.93 ಲಕ್ಷ ರೂ. ದಂಡ ವಿಧಿಸಲಾಗಿದೆ. ‘ಮನ್ನತ್’ ಹೊರಗೆ ಪಾಲಿಕೆಯ ಜಾಗದಲ್ಲಿ ಅನುಮತಿ ಪಡೆಯದೇ ರ್ಯಾಂಪ್ ನಿರ್ಮಿಸಿ ಅಲ್ಲಿ ವ್ಯಾನಿಟಿ ವ್ಯಾನ್, ಕಾರ್ ನಿಲ್ಲಿಸಲಾಗುತ್ತಿತ್ತು. ಸ್ಥಳೀಯ ನಾಗರೀಕರ ದೂರಿನ ನಂತರ ಮುಂಬೈ ಪಾಲಿಕೆ ಅದನ್ನು ತೆರವುಗೊಳಿಸಿತ್ತು.

ಆರ್.ಟಿ.ಐ ಕಾರ್ಯಕರ್ತ ಅನಿಲ್ ಗಲಗಲಿ ಅವರಿಗೆ ಮುಂಬೈ ಪಾಲಿಕೆ ಈ ಮಾಹಿತಿ ನೀಡಿದೆ. ಪಾಲಿಕೆಯಿಂದ 2015ರ ಫೆಬ್ರವರಿಯಲ್ಲಿ ಶಾರುಖ್ ಅವರಿಗೆ ನೋಟೀಸ್ ನೀಡಿದ್ದರೂ, ಅವರು ತೆರವುಗೊಳಿಸಿರಲಿಲ್ಲ. ನಂತರ ಪಾಲಿಕೆಯಿಂದಲೇ ತೆರವುಗೊಳಿಸಿ 1.93 ಲಕ್ಷ ರೂ ದಂಡ ಪಾವತಿಸಲು ತಿಳಿಸಲಾಗಿತ್ತು. ಶಾರುಖ್ ಚೆಕ್ ಮೂಲಕ ಹಣ ಪಾವತಿ ಮಾಡಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...