alex Certify
ಕನ್ನಡ ದುನಿಯಾ       Mobile App
       

Kannada Duniya

28 ವರ್ಷದ ನಂತರ ಪದವಿ ಪತ್ರ ಪಡೆದ ಶಾರೂಖ್

shah-rukh-khan-degree

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಕೊನೆಗೂ ಪದವಿ ಪತ್ರ ಪಡೆದುಕೊಂಡಿದ್ದಾರೆ. ಅದು ಕೂಡ ಬರೋಬ್ಬರಿ 28 ವರ್ಷಗಳ ನಂತರ. ಶಾರುಖ್ ಖಾನ್ ನವದೆಹಲಿಯ ಹಂಸರಾಜ್ ಕಾಲೇಜ್ ನಲ್ಲಿ 1988 ರಲ್ಲಿ ಓದಿದ್ದರು. ಆದರೂ ಅವರು ಪದವಿ ಪತ್ರ ಪಡೆದಿರಲಿಲ್ಲ.

1988ರಲ್ಲಿ ಹಂಸರಾಜ್ ಕಾಲೇಜ್ ನಲ್ಲಿ ಓದಿದ ಬಳಿಕ ಶಾರುಖ್ ಖಾನ್ ದೆಹಲಿಯಿಂದ ದೂರವಾಗಿದ್ದರು. ನಂತರ ಬಾಲಿವುಡ್ ನಲ್ಲಿ ನೆಲೆಕಂಡುಕೊಂಡರು. ಇದೀಗ ಅವರು ದೆಹಲಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಹೋಗಿದ್ದ ಸಂದರ್ಭದಲ್ಲಿ ತಾವು ಓದಿದ್ದ ಕಾಲೇಜಿಗೆ ಭೇಟಿ ನೀಡಿದ್ದು, ಬರೋಬ್ಬರಿ 28 ವರ್ಷಗಳ ನಂತರ ಪದವಿ ಪತ್ರ ಪಡೆದುಕೊಂಡಿದ್ದಾರೆ. ಶಾರುಖ್ ಖಾನ್ ಅವರಿಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು ಇದನ್ನು ನೀಡಿದರು.

ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಶಾರುಖ್ ಖಾನ್ ಅವರನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಮತ್ತೆ ಕೆಲವರು ವಿರೋಧಿಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಶಾರುಖ್ ಖಾನ್ ಬರೋಬ್ಬರಿ 28 ವರ್ಷಗಳ ಬಳಿಕ ತಾವು ಓದಿದ ಕಾಲೇಜ್ ನಿಂದ ಪದವಿ ಪತ್ರ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...