alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸ್ಟ್ ನಲ್ಲಿ ಶರಣ್, ಚಿಕ್ಕಣ್ಣರ ‘ರಾಜ್ –ವಿಷ್ಣು’

sran-ckn

ಯಶಸ್ವಿ ಚಿತ್ರ ‘ಅಧ್ಯಕ್ಷ’ ಬಳಿಕ ಶರಣ್ ಮತ್ತು ಚಿಕ್ಕಣ್ಣ ಒಂದಾಗಿ ನಟಿಸುತ್ತಿರುವ ‘ರಾಜ್ –ವಿಷ್ಣು’ ಆಗಸ್ಟ್ 4 ರಂದು ತೆರೆ ಕಾಣಲಿದೆ.

ತಮಿಳಿನ ‘ರಜನಿ ಮುರುಗನ್’ ಚಿತ್ರದ ರಿಮೇಕ್ ಆಗಿರುವ ‘ರಾಜ್ -ವಿಷ್ಣು’ ಕನ್ನಡದ ನೇಟಿವಿಟಿಗೆ ತಕ್ಕಂತೆ ಮೂಡಿ ಬಂದಿದ್ದು, ಶರಣ್ ಮತ್ತು ಚಿಕ್ಕಣ್ಣ ಮೋಡಿ ಮಾಡಿದ್ದಾರೆ. ತಮ್ಮದೇ ಹಾಸ್ಯ ಶೈಲಿಯ ಮೂಲಕ ಮನೆಮಾತಾಗಿರುವ ಶರಣ್ ಮತ್ತು ಚಿಕ್ಕಣ್ಣ ಮತ್ತೆ ಒಂದಾಗಿರುವುದು ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.

ರಾಮು ನಿರ್ಮಾಣ ಮಾಡಿರುವ ಚಿತ್ರವನ್ನು ಕೆ. ಮಾದೇಶ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ರಾಜೇಶ್ ಛಾಯಾಗ್ರಹಣ ಚಿತ್ರಕ್ಕಿದೆ.

ಶರಣ್, ಚಿಕ್ಕಣ್ಣ, ರವಿಶಂಕರ್, ಶ್ರೀನಿವಾಸ ಮೂರ್ತಿ, ಸಾಧುಕೋಕಿಲ, ಸುಚೇಂದ್ರ ಪ್ರಸಾದ್ ಅವರೊಂದಿಗೆ ವಿಶೇಷ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...