alex Certify
ಕನ್ನಡ ದುನಿಯಾ       Mobile App
       

Kannada Duniya

ನಗಲು ರೆಡಿನಾ..? ಬರ್ತಿದ್ದಾರೆ ಶರಣ್, ಚಿಕ್ಕಣ್ಣ

srn-cknmಭರ್ಜರಿ ಯಶಸ್ಸು ಕಂಡಿದ್ದ ‘ಅಧ್ಯಕ್ಷ’ ಚಿತ್ರದ ಬಳಿಕ, ಶರಣ್ ಮತ್ತು ಚಿಕ್ಕಣ್ಣ ಮತ್ತೆ ನಗಿಸಲು ಬರುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ರಾಜ್ ವಿಷ್ಣು’ ಇದೇ ವಾರ ರಿಲೀಸ್ ಆಗ್ತಿದೆ.

ತಮಿಳಿನ ‘ರಜನಿ ಮುರುಘ’ ಚಿತ್ರದ ರಿಮೇಕ್ ಆಗಿರುವ ‘ರಾಜ್ –ವಿಷ್ಣು’ವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ನಿರ್ಮಿಸಲಾಗಿದೆ.

ಕೋಟಿ ನಿರ್ಮಾಪಕ ರಾಮು ನಿರ್ಮಾಣ ಮಾಡಿರುವ ಚಿತ್ರವನ್ನು ಕೆ. ಮಾದೇಶ್ ನಿರ್ದೇಶಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ರಾಜೇಶ್ ಛಾಯಾಗ್ರಹಣ ಚಿತ್ರಕ್ಕಿದೆ.

ಶರಣ್, ಚಿಕ್ಕಣ್ಣ ಅವರೊಂದಿಗೆ ಶ್ರೀನಿವಾಸಮೂರ್ತಿ, ಸಾಧು ಕೋಕಿಲಾ, ರವಿಶಂಕರ್, ಸುಚೇಂದ್ರ ಪ್ರಸಾದ್ ಮೊದಲಾದವರು ಅಭಿನಯಿಸಿದ್ದಾರೆ.

ವಿಶೇಷ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮನೆ ಮಾತಾಗಿರುವ ಶರಣ್, ಚಿಕ್ಕಣ್ಣ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಬರುತ್ತಿದ್ದಾರೆ. ಸುಮಾರು 300 ಚಿತ್ರ ಮಂದಿರಗಳಲ್ಲಿ ‘ರಾಜ್ ವಿಷ್ಣು’ ತೆರೆಗೆ ಬರುತ್ತಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...