alex Certify
ಕನ್ನಡ ದುನಿಯಾ       Mobile App
       

Kannada Duniya

`ಶಕೀಲಾ’ ಚಿತ್ರದ ಫಸ್ಟ್ ಲುಕ್ ಹೀಗಿದೆ ಗೊತ್ತಾ…?

ತೊಂಬತ್ತರ ದಶಕದ ದಕ್ಷಿಣ ಭಾರತ ವಯಸ್ಕರ ಚಿತ್ರಗಳ ತಾರೆಯಾಗಿ ಮೆರೆದ ಶಕೀಲ ಜೀವನ ಚರಿತ್ರೆ ತೆರೆ ಮೇಲೆ ಬರುತ್ತಿರುವುದು ಗೊತ್ತೇ ಇದೆ. ತೆರೆಯ ಮೇಲೆ ಶಕೀಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಿಚಾ ಚಡ್ಡಾ ಈ ಚಿತ್ರದ ಫೋಟೋಶೂಟ್ ನ ಫಸ್ಟ್ ಲುಕ್ ಅನ್ನು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ್ದು ವೈರಲ್ ಆಗಿದೆ.

ಹಿಂದೆ ನೀಲಿ ಮಿಶ್ರಿತ ಬಣ್ಣ ಬಳಿದಿರುವ ಗೋಡೆಯಲ್ಲಿ ಶಕೀಲಾ ಟೈಟಲ್ ಜೊತೆ ನಾಟ್ ಎ ಪೋರ್ನ್ ಸ್ಟಾರ್ ಎಂಬ ಟ್ಯಾಗ್ ಇದೆ. ಜೊತೆಗೆ ಆಕೆಯ ಧರ್ಮ, ದಪ್ಪ ಶರೀರ, ಮೈ ಬಣ್ಣದ ಕಡೆಗೂ ಬೊಟ್ಟು ಮಾಡುತ್ತಿದೆ. ಈ ಗೋಡೆಯ ಶಕೀಲಾ ಪಾತ್ರಧಾರಿ ರಿಚಾ ಚಡ್ಡಾ ಮೈ ತುಂಬಾ ಆಭರಣ ಧರಿಸಿ ನಿಂತಿದ್ದಾರೆ. ಈ ಫೋಟೋಗೆ ರಿಚಾ ಚಡ್ಡಾ ಬೋಲ್ಡ್ ಈಸ್ ಗೋಲ್ಡ್ ಎಂಬ ಕ್ಯಾಪ್ಶನ್ ನೀಡಿದ್ದಾರೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರ 2019ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಚಿತ್ರಕ್ಕಾಗಿ ರಿಚಾ ಸ್ವತಃ ಶಕೀಲಾ ಅವರನ್ನು ಭೇಟಿಯಾಗಿ ಟಿಪ್ಸ್ ಪಡೆದುಕೊಂಡು ಬಂದಿದ್ದರು. ಚಿತ್ರದ ಶೂಟಿಂಗ್ ಕರ್ನಾಟಕದ ಚಿಕ್ಕ ಹಳ್ಳಿಯೊಂದರಲ್ಲಿ ನಡೆದಿತ್ತು. ಶೂಟಿಂಗ್ ಲೊಕೇಶನ್ ನಲ್ಲಿ ಕೇರಳ ಸೀರೆಯುಟ್ಟು ತೆಗೆದಿದ್ದ ಕೆಲವೊಂದು ಫೋಟೋಗಳನ್ನು ರಿಚಾ ಈ ಹಿಂದೆ ಶೇರ್ ಮಾಡಿದ್ದರು. ಅದಾದ ಬಳಿಕ ಚಿತ್ರತಂಡ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಫಸ್ಟ್ ಲುಕ್ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...