alex Certify
ಕನ್ನಡ ದುನಿಯಾ       Mobile App
       

Kannada Duniya

ವಿಭಿನ್ನ ರೀತಿಯಲ್ಲಿ ರಯಿಸ್ ಚಿತ್ರ ಪ್ರಚಾರಕ್ಕಿಳಿದ ಶಾರುಖ್

raees-4

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ‘ರಯಿಸ್’ ಚಿತ್ರ ಇದೇ ತಿಂಗಳು 25ರಂದು ತೆರೆಗೆ ಬರ್ತಾ ಇದೆ. ಕಿಂಗ್ ಖಾನ್ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಿದ್ದಾರೆ. ಚಿತ್ರದ ಪ್ರಚಾರವನ್ನು ಈ ಬಾರಿ ವಿಭಿನ್ನವಾಗಿ ಮಾಡಲು ಶಾರುಖ್ ನಿರ್ಧರಿಸಿದ್ದಾರೆ.

ಶಾರುಖ್ ಖಾನ್ ರೈಲಿನಲ್ಲಿ ಚಿತ್ರದ ಪ್ರಮೋಷನ್ ಮಾಡಲಿದ್ದಾರೆ. ಮುಂಬೈನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುವ ಶಾರುಖ್, ಪ್ರತಿಯೊಂದು ನಿಲ್ದಾಣದಲ್ಲಿಯೂ ತಮ್ಮ ಅಭಿಮಾನಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ.

ಸೋಮವಾರ ಸಂಜೆ 5 ಗಂಟೆಗೆ ಮುಂಬೈ ರೈಲ್ವೆ ನಿಲ್ದಾಣದಲ್ಲಿ ರೈಲೇರುವ ಶಾರುಖ್ ಮಂಗಳವಾರ ಬೆಳಿಗ್ಗೆ 10.55 ಕ್ಕೆ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲಿದ್ದಾರೆ. ಆಗಸ್ಟ್ ಕ್ರಾಂತಿ ಎಕ್ಸ್ಪ್ರೆಸ್ ನಲ್ಲಿ ಶಾರುಖ್ ಪ್ರಚಾರ ಕೈಗೊಳ್ಳಲಿದ್ದಾರೆ. ಮಧ್ಯೆ ಸಿಗುವ ರೈಲ್ವೆ ನಿಲ್ದಾಣಗಳಲ್ಲಿ ಶಾರುಖ್ ಪ್ರಚಾರ ನಡೆಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...