alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ ಸೀಕ್ರೆಟ್ ಆಗಿದೆ ಅನುಷ್ಕಾಳ ಈ ವಿಚಾರ

ಆನಂದ್ ಎಲ್ ರಾಯ್ ಝೀರೋ ಚಿತ್ರದ ಶಾರುಕ್ ಖಾನ್ ಹಾಗೂ ಕತ್ರಿನಾ ಕೈಫ್ ಲುಕ್ ಬಿಡುಗಡೆಯಾಗಿದೆ. ಆದ್ರೆ ಚಿತ್ರದಲ್ಲಿ ಕಾಣಿಸಿಕೊಳ್ತಿರುವ ನಟಿ ಅನುಷ್ಕಾ ಶರ್ಮಾ ಪಾತ್ರವನ್ನು ಗುಪ್ತವಾಗಿಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶರ್ಮಾ ಝೀರೋ ಚಿತ್ರದ ಬಗ್ಗೆ ಮಾತ್ರ ಯಾವುದೇ ಪೋಸ್ಟ್ ಹಾಕಿಲ್ಲ.

ಮೂಲಗಳ ಪ್ರಕಾರ, ಅನುಷ್ಕಾ ಶರ್ಮಾ ಚಿತ್ರದಲ್ಲಿ ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಪಾತ್ರಕ್ಕಾಗಿ ಸ್ಕಿನ್ ಗೆ ಹೊಸ ಲುಕ್ ನೀಡಲಾಗಿದೆ. ಈ ಚಿತ್ರದಲ್ಲಿ ಅನುಷ್ಕಾ ಸಂಪೂರ್ಣ ಭಿನ್ನವಾಗಿ ಕಾಣಿಸಲಿದ್ದಾಳೆ. ಅನುಷ್ಕಾ ಶೂಟಿಂಗ್ ಗೂ ಮುನ್ನ ಎರಡು ದಿನಗಳ ಕಾಲ ಪಾತ್ರಕ್ಕಾಗಿ ತಯಾರಿ ನಡೆಸ್ತಾಳಂತೆ.

ಸುಮಾರು ಐದು ಗಂಟೆಯವರೆಗೆ ಅನುಷ್ಕಾ ಸ್ಕಿನ್ ಬದಲಾಯಿಸುವ ಕೆಲಸ ನಡೆಯುತ್ತದೆಯಂತೆ. ನಿರ್ದೇಶಕರು ಹಾಗೂ ನಿರ್ಮಾಪಕರು ಅನುಷ್ಕಾ ಪಾತ್ರವನ್ನು ಸಂಪೂರ್ಣ ಗುಪ್ತವಾಗಿಟ್ಟಿದ್ದಾರೆ. ಶೂಟಿಂಗ್ ವೇಳೆ ಸುಲಭವಾಗಿ ಬಂದು ಹೋಗ್ಲಿ ಎನ್ನುವ ಕಾರಣಕ್ಕೆ ಶೂಟಿಂಗ್ ಗೆ ಹತ್ತಿರದ ಸ್ಥಳದಲ್ಲಿಯೇ ವ್ಯಾನಿಟಿ ವ್ಯಾನ್ ನಿಲ್ಲಿಸಲಾಗುತ್ತದೆಯಂತೆ. ಅನುಷ್ಕಾ ಫೋನ್ ಮುಟ್ಟುವ ಅನುಮತಿ ಕೂಡ ಯಾರಿಗೂ ಇಲ್ಲ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...