alex Certify
ಕನ್ನಡ ದುನಿಯಾ       Mobile App
       

Kannada Duniya

ಗಲಾಟೆ ಮಾಡಿಕೊಂಡಿದ್ದ ಶೋ ನಲ್ಲಿ ಮತ್ತೆ ಒಂದಾದ ಸ್ನೇಹಿತರು

ಬಾಲಿವುಡ್ ದಬಾಂಗ್ ಸಲ್ಮಾನ್ ಖಾನ್ ‘ದಸ್ ಕಾ ಧಮ್’ ಶೋನಲ್ಲಿ ಬಾದ್ ಶಾ ಶಾರುಕ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಶೋನ ಕೆಲ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ಶೋನಲ್ಲಿ ಸಲ್ಮಾನ್ ಖಾನ್ ಹಾಗೂ ಶಾರುಕ್ ಖಾನ್ ಸಿಕ್ಕಾಪಟ್ಟೆ ಮಸ್ತಿ ಮಾಡಿದ್ದಾರೆ.

ವಿಡಿಯೋದಲ್ಲಿ ತಳ್ಳುವ ಗಾಡಿ ಮೇಲೆ ಶಾರುಕ್ ಕುಳಿತುಕೊಂಡಿದ್ರೆ ಅದನ್ನು ಸಲ್ಮಾನ್ ತಳ್ಳುತ್ತಿದ್ದಾರೆ. ಹಿಂದೆ ‘ಯೇ ಬಂಧನ್ ತೋ..ಪ್ಯಾರಕಾ ಬಂಧನ್ ಹೇ’ ಹಾಡು ಕೇಳಿ ಬರ್ತಿದೆ. ಬಿಗ್ ಬಾಸ್ ವಿನ್ನರ್ ಶಿಲ್ಪಾ ಶಿಂಧೆ ಹಾಗೂ ರಾಮನ್ ಬಲ್ಲಾ ಕಾಣಿಸಿಕೊಳ್ಳಲಿದ್ದಾರೆ. ಮೇಕರ್ಸ್ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಿದ್ದಾರೆ.

2008 ರಲ್ಲಿ ದಸ್ ಕಾ ಧಮ್ ಕಾರ್ಯಕ್ರಮದಲ್ಲಿಯೇ ಶಾರುಕ್-ಸಲ್ಮಾನ್ ಖಾನ್ ಮುನಿಸಿಕೊಂಡಿದ್ದರು. ಈಗ ಇದೇ ಶೋನಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.

2008ರಲ್ಲಿ ಸಲ್ಮಾನ್ ಖಾನ್ ದಸ್ ಕಾ ದಮ್ ಕಾರ್ಯಕ್ರಮ ನಡೆಸುತ್ತಿದ್ದರು. ಇದೇ ವೇಳೆ ಶಾರುಕ್ ಕೂಡ ಕಾರ್ಯಕ್ರಮವೊಂದನ್ನು ನಿರೂಪಣೆ ಮಾಡ್ತಿದ್ದರು. ಸಲ್ಮಾನ್ ಖಾನ್ ಶೋಗೆ ಟಿಆರ್ಪಿ ಜಾಸ್ತಿಯಿತ್ತು. ಈ ವೇಳೆ ಚಿಟಕಿ ಹೊಡೆದಿದ್ದ ಸಲ್ಮಾನ್, ಕಿಂಗ್ ಖಾನ್ ಹೆಸರು ಹೇಳೋದನ್ನು ನಿಲ್ಲಿಸಿ ಎಂದಿದ್ದರು. ಇದಕ್ಕೆ ಶಾರುಕ್ ಖಾನ್ ವೈಯಕ್ತಿಕವಾಗಿ ಕಮೆಂಟ್ ಮಾಡಿದ್ದರು.ಇದಾದ ಬಳಿಕ 5 ವರ್ಷಗಳ ಕಾಲ ಇಬ್ಬರೂ ಮಾತನಾಡ್ತಿರಲಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...