alex Certify
ಕನ್ನಡ ದುನಿಯಾ       Mobile App
       

Kannada Duniya

2ನೇ ಬಾರಿ ತಾಯಿಯಾಗ್ತಿರುವ ನಟನ ಪತ್ನಿ ಎಲ್ಲರ ಮುಂದಿಟ್ಲು ತನ್ನ ಸಮಸ್ಯೆ

ಬಾಲಿವುಡ್ ನಟ ಶಾಹಿದ್ ಕಪೂರ್ ಎರಡನೇ ಬಾರಿ ತಂದೆಯಾಗ್ತಿದ್ದಾರೆ. ಶಾಹಿದ್ ಪತ್ನಿ ಮೀರಾ ಗರ್ಭಿಣಿ ಎಂಬ ವಿಚಾರವನ್ನು ಕೆಲ ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹೇಳಿದ್ದರು. ಈಗ ಮೀರಾ ಮಾಡಿರುವ ಪೋಸ್ಟ್ ಒಂದು ಚರ್ಚೆಗೆ ಕಾರಣವಾಗಿದೆ. ತಾನು ಎರಡನೇ ಬಾರಿ ಗರ್ಭಿಣಿ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿರುವ ಮೀರಾ ಎಷ್ಟು ನೋವುಣ್ಣುತ್ತಿದ್ದೇನೆ ಎಂಬುದನ್ನೂ ಹೇಳಿದ್ದಾರೆ.

ಮೀರಾಗಿನ್ನೂ 23 ವರ್ಷ. ಚಿಕ್ಕ ವಯಸ್ಸಿನಲ್ಲಿಯೇ ಮೀರಾ ಎರಡನೇ ಬಾರಿ ತಾಯಿಯಾಗ್ತಿದ್ದಾರೆ. ಎರಡು ವರ್ಷದ ಮೀಶಾಳ ಫೋಟೋವನ್ನು ಆಗಾಗ ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದ ಮೀರಾ ಗರ್ಭಿಣಿಯಾಗಿ ತುಂಬಾ ಕಷ್ಟ ಅನುಭವಿಸ್ತಿದ್ದಾರಂತೆ. ನಮ್ಮ ಹಳೇ ಜೀನ್ಸ್ ನಮಗೆ ಫಿಟ್ ಆಗಲ್ಲ ಅನ್ನೋದು ವಿಚಿತ್ರವೆನ್ನಿಸುತ್ತದೆ. ಗರ್ಭಿಣಿಯರ ಜೀನ್ಸ್ ತುಂಬಾ ದೊಡ್ಡದಾಗಿರುತ್ತದೆ ಎಂದು ಮೀರಾ ಪೋಸ್ಟ್ ಮಾಡಿದ್ದಾರೆ. ಇದ್ರ ಜೊತೆಗೆ ಗೊಂದಲದಲ್ಲಿರುವ ಫೋಟೋವೊಂದನ್ನು ಮೀರಾ ಹಂಚಿಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ಗರ್ಭಿಣಿಯಾದವಳು ಏನೆಲ್ಲ ತೊಂದರೆ ಅನುಭವಿಸಬೇಕು ಎಂಬುದನ್ನು ಮೀರಾ ಸೂಕ್ಷ್ಮವಾಗಿ ಹೇಳಿದ್ದಾರೆ. ಮೀರಾ ಮದುವೆ ಜುಲೈ 7,2015ರಂದು ನಡೆದಿತ್ತು. 2016ರಲ್ಲಿ ಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...