alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯದಲ್ಲಿಯೇ ಅಪ್ಪನಾಗಲಿದ್ದಾನೆ ಈ ಬಾಲಿವುಡ್ ನಟ

mira-k

ಬಾಲಿವುಡ್ ನಟ ಶಾಹಿದ್ ಕಪೂರ್ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಶಾಹಿದ್ ಪತ್ನಿ ಮೀರಾ ರಜಪೂತ್ ಗರ್ಭಿಣಿ.

ಶಾಹಿದ್ ಪತ್ನಿ ಮೀರಾ ಜೊತೆಗಿರುವ ಸೆಲ್ಫಿಯನ್ನು ಇನ್ಸ್ಟ್ರಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇದ್ರಲ್ಲಿ ಮೀರಾ ಬೇಬಿ ಬಂಪ್ ಸ್ಪಷ್ಟವಾಗಿ ಕಾಣ್ತಾ ಇದೆ. ಫೋಟೋದಲ್ಲಿ ಶಾಹಿದ್ ಮುಖ ಸರಿಯಾಗಿ ಕಾಣ್ತಿಲ್ಲ. ಶಾಹಿದ್ ಹಾಗೂ ಮೀರಾ ಮದುವೆ ಜುಲೈ 2,2015 ರಲ್ಲಿ ನೆರವೇರಿತ್ತು. ದೆಹಲಿ ಬಳಿಯ ಛತರ್ಪುರ್ ಫಾರ್ಮ್ ಹೌಸ್ ನಲ್ಲಿ ನಡೆದಿತ್ತು. ಮದುವೆ ಸಮಾರಂಭದಲ್ಲಿ ಕೇವಲ ಹತ್ತಿರದ ಸಂಬಂಧಿಗಳು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಜುಲೈ 12ರಂದು ದೆಹಲಿಯಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ನಟ-ನಟಿಯರ ದಂಡೇ ಅಲ್ಲಿಗೆ ಆಗಮಿಸಿತ್ತು. ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಶಾಹಿದ್, ಪತ್ನಿ ಜೊತೆಗಿರುವ ಫೋಟೋ ಅಪ್ ಲೋಡ್ ಮಾಡಿ,ತಾನು ಶೀಘ್ರದಲ್ಲಿಯೇ ತಂದೆಯಾಗ್ತಿದ್ದೇನೆಂಬ ಖುಷಿಯನ್ನು ಎಲ್ಲರ ಜೊತೆ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...