alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪ ಆಗುವುದನ್ನು ಒಪ್ಪಿಕೊಂಡ ನಟ

shahid- a 17

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಅವರ ದಾಂಪತ್ಯ ಜೀವನಕ್ಕೆ ಸುಂದರ ತಿರುವು ಸಿಕ್ಕಿದ್ದು, ಈ ವಿಷಯ ಮೊದಲು ಗೊತ್ತಾಗಿದ್ದು, ಶಾಹಿದ್ ಮಾಜಿ ಪ್ರೇಯಸಿ ಕರೀನಾ ಕಪೂರ್ ಗೆ ಎಂದೆಲ್ಲಾ ಸುದ್ದಿಯಾಗಿತ್ತು.

ಈ ಸುದ್ದಿಯನ್ನು ಶಾಹಿದ್ ಕಪೂರ್ ಅವರೇ ಒಪ್ಪಿಕೊಂಡಿದ್ದಾರೆ. ತಾವು ತಂದೆಯಾಗುತ್ತಿರುವುದನ್ನು ಶಾಹಿದ್ ಖುಷಿಯಿಂದ ಹೇಳಿಕೊಂಡಿದ್ದಾರೆ. ತಾವು ಅಭಿನಯಿಸಿರುವ ‘ಉಡ್ತಾ ಪಂಜಾಬ್’ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ, ಈ ಕುರಿತಂತೆ ಎದುರಾದ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಿದ ಶಾಹಿದ್ ಕಪೂರ್, ಸುತ್ತಿ ಬಳಸಿ ಯಾಕೆ ಪ್ರಶ್ನೆ ಕೇಳ್ತಿರಾ? ಹೌದು, ನಾನು ಕೆಲವೇ ದಿನಗಳಲ್ಲಿ ತಂದೆಯಾಗಲಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮೀರಾ ರಜಪೂತ್ ಅವರೊಂದಿಗೆ ಶಾಹಿದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

‘ರಂಗೂನ್’ ಚಿತ್ರದ ಸೆಟ್ ನಲ್ಲಿ ಶಾಹಿದ್ ತಮ್ಮ ಪತ್ನಿ ಗರ್ಭಿಣಿಯಾಗಿರುವ ವಿಷಯವನ್ನು ನಟ ಸೈಫ್ ಆಲಿಖಾನ್ ಅವರಿಗೆ ತಿಳಿಸಿದ್ದರು. ಸೈಫ್ ತಮ್ಮ ಪತ್ನಿ ಕರೀನಾಗೆ ಹೇಳಿದ್ದು, ಅಲ್ಲಿಂದ ಮೀರಾ ಗರ್ಭಿಣಿಯಾದ ಬಗ್ಗೆ ಚರ್ಚಿತ ವಿಷಯವಾಗಿತ್ತು. ಇದೀಗ ಶಾಹಿದ್ ಅವರೇ ವಿಷಯವನ್ನು ಅಧಿಕೃತವಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...