alex Certify
ಕನ್ನಡ ದುನಿಯಾ       Mobile App
       

Kannada Duniya

‘ಪದ್ಮಾವತಿ’ಗಾಗಿ 10 ಕೋಟಿ ರೂ. ಕೇಳಿದ ಶಾಹಿದ್

MUMBAI, INDIA FEBRUARY 24: Shahid Kapoor flaunts his new hair style.(Photo by Milind Shelte/India Today Group/Getty Images)ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಸೆಟ್ಟೇರುವ ಮುನ್ನವೇ ಚರ್ಚೆಗೆ ಗ್ರಾಸವಾಗಿದೆ. ‘ಪದ್ಮಾವತಿ’ ಚಿತ್ರದ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಲಿದ್ದಾರೆ. ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ, ಪದ್ಮಾವತಿಯ ಪತಿ ಅಂದ್ರೆ ರಾಜಾ ರವಲ್ ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ಅಬ್ಬರಿಸಲಿದ್ದಾರೆ.

ಈ ಪಾತ್ರಕ್ಕಾಗಿ ಶಾಹಿದ್ ಮನವೊಲಿಸೋದು ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕಬ್ಬಿಣದ ಕಡಲೆಯಾಗಿತ್ತು. ರಣವೀರ್ ಸಿಂಗ್ ಪಾತ್ರಕ್ಕೆ ಸರಿಸಮನಾಗಿ ಸ್ಕ್ರಿಪ್ಟ್ ಇರಬೇಕು ಅಂತಾ ಡಿಮ್ಯಾಂಡ್ ಮಾಡಿದ್ದ ಶಾಹಿದ್, ಸಂಭಾವನೆಯಲ್ಲೂ ಸಂಕೋಚ ಮಾಡ್ಕೊಂಡಿಲ್ಲ. ಪಾತ್ರದ ಘನತೆಗೆ ತಕ್ಕಂತೆ ಭರ್ತಿ ಸಂಭಾವನೆ ಕೇಳಿದ್ದಾರೆ. ಮೊದಲೆಲ್ಲ 5-6 ಕೋಟಿ ತೆಗೆದುಕೊಳ್ತಿದ್ದ ಶಾಹಿದ್, ಪದ್ಮಾವತಿ ಸಿನಿಮಾಕ್ಕೆ 9-10 ಕೋಟಿ ರೂಪಾಯಿ ಕೇಳಿದ್ದಾರೆ. ‘ಪದ್ಮಾವತಿ’ ಸಂಜಯ್ ಲೀಲಾ ಬನ್ಸಾಲಿ ಅವರ ಕನಸಿನ ಕೂಸು.

ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು, ರಾಜನ ಪಾತ್ರಕ್ಕೆ ಶಾಹಿದ್ ಬೆಸ್ಟ್ ಅಂತಾ ಬನ್ಸಾಲಿ ಆಯ್ಕೆ ಮಾಡಿದ್ದಾರೆ. ಹಾಗಾಗಿ 4 ಕೋಟಿ ಜಾಸ್ತಿ ಕೊಡಬೇಕು ಅನ್ನೋ ಕಾರಣಕ್ಕೆ ಶಾಹಿದ್ ರನ್ನು ಕೈಬಿಡೋದು ಬೇಡ ಎಂದುಕೊಂಡಿರೋ ಬನ್ಸಾಲಿ ಭಾರೀ ಸಂಭಾವನೆ ಕೊಡಲು ಒಪ್ಪಿದ್ದಾರಂತೆ. ಆದ್ರೆ ಚಿತ್ರೀಕರಣ ಆರಂಭವಾಗುಷ್ಟರಲ್ಲಿ ಇನ್ನೇನಾದ್ರೂ ಬದಲಾವಣೆ ಆಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...