alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರುಖ್ ಮನೆಯಲ್ಲಿ ಓಡಾಡ್ತಿದ್ಯಂತೆ ಸುಂದರ ದೆವ್ವ!

sharukh

ಮುಂಬೈನಲ್ಲಿರೋ ನಟ ಶಾರುಖ್ ಖಾನ್ ನಿವಾಸ ಮನ್ನತ್ ನಲ್ಲಿ ದೆವ್ವದ ಕಾಟ ಶುರುವಾಗಿದೆಯಂತೆ. ಹೊತ್ತಲ್ಲದ ಹೊತ್ತಿನಲ್ಲಿ ಓಡಾಡೋ ದೆವ್ವವನ್ನು ನೆನೆದು ಸಾಮಾನ್ಯವಾಗಿ ಎಲ್ಲರೂ ಭಯಪಡ್ತಾರೆ. ಆದ್ರೆ ಶಾರುಖ್ ಮಾತ್ರ ಮನೆಯ ಕೋಣೆಯಲ್ಲಿ ಒಂಟಿಯಾಗಿ ಕುಳಿತು ದೆವ್ವ, ಭೂತ ಎಲ್ಲವೂ ಅಂಧವಿಶ್ವಾಸ, ಅಂಥದ್ದೇನೂ ಇಲ್ಲ ಎನ್ನುತ್ತಿದ್ರು.

ಇದ್ದಕ್ಕಿದ್ದಂತೆ ಕೋಣೆಯ ಬಾಗಿಲು ಬಂದ್ ಆಗಿತ್ತು, ಸಂಗೀತದ ಸದ್ದು, ಒಂದಾದ ಮೇಲೊಂದರಂತೆ ಅಚಾನಕ್ ಘಟನೆಗಳು. ಕಿಂಗ್ ಖಾನ್ ಗೂ ಸಣ್ಣನೆಯ ಭಯ. ಆತಂಕದಲ್ಲೇ ಯಾರು ಅಂತಾ ಶಾರುಖ್ ಪ್ರಶ್ನಿಸಿದಾಗ ಹೆಣ್ಣುಧ್ವನಿಯೊಂದು ಅದಕ್ಕುತ್ತರಿಸಿತ್ತು. ಆ ಹೆಣ್ಣು ಭೂತ ಶಾರುಖ್ ಅಭಿಮಾನಿಯಂತೆ. ಅವರನ್ನು ಖುದ್ದಾಗಿ ನೋಡೋ ಆಸೆಯಿಂದ ಬಂದಿತ್ತಂತೆ.

ಶಾರುಖ್ ಗೆ ಆ ಸುಂದರ ಭೂತವನ್ನು ನೋಡೋ ಆಸೆ. ಆದ್ರೆ ಎಪ್ರಿಲ್ 24ರಂದು ತನ್ನನ್ನು ನೋಡೋಕೆ ಥಿಯೇಟರ್ ಗೆ ಬನ್ನಿ ಎಂದ ಪಿಶಾಚಿ ಅಲ್ಲಿಂದ ಮಾಯವಾಗಿತ್ತು. ಅಷ್ಟಕ್ಕೂ ಅದು ನಿಜವಾದ ದೆವ್ವವಲ್ಲ. ನಟಿ ಅನುಷ್ಕಾ ಶರ್ಮಾ ಫಿಲ್ಲೌರಿ ಚಿತ್ರದ ಪ್ರಮೋಷನ್ ಗಾಗಿ ದೆವ್ವದ ಅವತಾರದಲ್ಲಿ ಬಂದಿದ್ಲು. ಶಾರುಖ್ ಕೂಡ ಈ ದೆವ್ವದ ಆಟವನ್ನ ಸಖತ್ ತಮಾಷೆಯಾಗಿ ವಿಡಿಯೋ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...