alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟಿಯನ್ನು ನೋಡಿ ಶಾಕ್ ಆಗಿದ್ದಾರೆ ಅಭಿಮಾನಿಗಳು

ಶಾರುಖ್ ಖಾನ್ ಅಭಿನಯದ ಪರ್ದೇಸ್ ಚಿತ್ರದ ಮೂಲಕ ನಟಿ ಮಹಿಮಾ ಚೌಧರಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ರು. ಸೂಪರ್ ಹಿಟ್ ಚಿತ್ರದೊಂದಿಗೆ ಸಿನಿ ಜರ್ನಿ ಆರಂಭಿಸಿದ್ದ ಮಹಿಮಾ ಚೌಧರಿ, ಬಾಗ್ಭಾನ್, ದಢಕನ್, ದಿಲ್ ಕ್ಯಾ ಕರೇ, ದಿಲ್ ಹೈ ತುಮ್ಹಾರಾ ಸೇರಿದಂತೆ ಹಲವು ಸಿನೆಮಾಗಳಲ್ಲಿ ನಟಿಸಿದ್ದಾರೆ.

90ರ ದಶಕದ ಈ ನಟಿಯನ್ನು ಬಹುತೇಕ ಎಲ್ಲರೂ ಮರೆತೇ ಬಿಟ್ಟಿದ್ರು. ಆದ್ರೆ ಇತ್ತೀಚೆಗಷ್ಟೆ ಮಹಿಮಾ ಚೌಧರಿಯ ಫೋಟೋ ಒಂದು ವೈರಲ್ ಆಗಿದೆ. ಅದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಐ ಲವ್ ಮೈ ಇಂಡಿಯಾ ಹಾಡಿನಲ್ಲಿ ಕ್ಯೂಟಾಗಿ ಕುಣಿದಿದ್ದ ಮಹಿಮಾ ಇವಳೇನಾ ಅಂತಾ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಹಿಮಾ ಚೌಧರಿ ಸಿಂಗಲ್ ಮದರ್, ಅವರಿಗೆ ಪುಟ್ಟ ಮಗಳಿದ್ದಾಳೆ. ಸಿನೆಮಾಗಳಲ್ಲಿ ಹೆಚ್ಚು ಚಾನ್ಸ್ ಸಿಗದೇ ಇದ್ದಿದ್ರಿಂದ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ, ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸೋ ಮೂಲಕ ಮಹಿಮಾ ಹಣ ಗಳಿಸಲು ಶುರು ಮಾಡಿದ್ದರಂತೆ.

ವೈಯಕ್ತಿಕ ಬದುಕಿನಲ್ಲೂ ಮಹಿಮಾ ಚೌಧರಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಪತಿಯಿಂದ ಈಗಾಗ್ಲೇ ದೂರವಾಗಿದ್ದಾರೆ. ಇಷ್ಟು ಪ್ರತಿಭಾವಂತ ನಟಿಯನ್ನು ಬಾಲಿವುಡ್ ಮಂದಿ ಅಲಕ್ಷಿಸಿದ್ದರಿಂದ್ಲೇ ಮಹಿಮಾ ಸ್ಥಿತಿ ಈ ರೀತಿ ಆಗಿದೆ ಅನ್ನೋದು ಅಭಿಮಾನಿಗಳ ಬೇಸರ. ಗುರುತೇ ಸಿಗದಷ್ಟು ದಪ್ಪಗಾಗಿರೋ ಈ ನಟಿ ಮತ್ತೆ ಮೊದಲಿನಂತಾಗ್ಲಿ ಅನ್ನೋದೇ ಎಲ್ಲರ ಆಶಯ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...