alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ ವೈರಲ್ ಆಯ್ತು ಶಾರುಖ್ ಖಾನ್ ರಹಸ್ಯ

saru-marks

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ತಮ್ಮ ನಟನೆಯ ಮೂಲಕವೇ  ಕಿಂಗ್ ಖಾನ್ ಆಗಿದ್ದಾರೆ. ನಟನೆಯಲ್ಲಿ ನಂಬರ್ ಒನ್ ಆದರೂ ಅವರು ಓದಿನಲ್ಲಿ ಹಿಂದಿದ್ದರೆಂಬ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗತೊಡಗಿದೆ.

ಶಾರುಖ್ ದೆಹಲಿ ವಿಶ್ವವಿದ್ಯಾಲಯ ವ್ಯಾಪ್ತಿಯ ಹನ್ಸ್ ರಾಜ್ ಕಾಲೇಜ್ ನಲ್ಲಿ ಓದಿದ್ದು, ನಿಮಗೆಲ್ಲಾ ತಿಳಿದೇ ಇದೆ. ಶಾರುಖ್ ಖಾನ್ ಕಾಲೇಜಿಗೆ ಪ್ರವೇಶ ಪಡೆದ ಪತ್ರ ಮತ್ತು ಅವರ ಮಾರ್ಕ್ಸ್ ಕಾರ್ಡ್ ವೈರಲ್ ಆಗಿದೆ. ಇಂಗ್ಲಿಷ್ ನಲ್ಲಿ 55 ಅಂಕ ಗಳಿಸಿರುವುದು ಭಾರೀ ಚರ್ಚೆಗೆ ಒಳಗಾಗಿದೆ.

ಇದು ಕಡಿಮೆ ಅಂಕ ಎಂದು ಕೆಲವರು ಹೇಳಿದ್ದು, ಮತ್ತೆ ಕೆಲವರು ಶಾರುಖ್ ಒಟ್ಟು ಶೇ. 74.25 ರಷ್ಟು ಅಂಕಗಳಿಸಿದ್ದು, ಆಗಿನ ಕಾಲಕ್ಕೆ ಅದೇ ಉತ್ತಮವಾದ ಅಂಕಗಳಿಕೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಶಾರುಖ್ ಖಾನ್ ಅಂಕಗಳಿಂದ ಜೀವನ ಕಂಡುಕೊಳ್ಳದಿದ್ದರೂ, ಅವರು ತಮ್ಮ ನಟನಾ ಕೌಶಲ್ಯದಿಂದಲೇ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದಾರೆ. ಯಶಸ್ಸಿಗೆ ಅಂಕ ಗಳಿಕೆಯೊಂದೇ ಮಾನದಂಡವಲ್ಲ ಎಂಬ ಮಾತು ನಿಜವೆನಿಸುತ್ತದೆ. ಇಂತಹ ಹಲವಾರು ನಿದರ್ಶನಗಳಿವೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...