alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪತ್ನಿ ಕುರಿತ ಶಾರೂಕ್ ಮಾತು…!

ಬಾಲಿವುಡ್ ಕಿಂಗ್ ಖಾನ್ ಶಾರುಕ್ ಹೇಳಿದ ಒಂದು ಮಾತು ಪತ್ನಿ ಗೌರಿಖಾನ್ ಹೃದಯ ರಂಗೇರುವಂತೆ ಮಾಡಿದೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಶಾರುಕ್ ಕೊಟ್ಟಂತಾ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

ಇನ್ಸ್ಟಾಗ್ರಾಂ ನಲ್ಲಿ ಅಭಿಮಾನಿಯೊಬ್ಬ ಜೀವನದಲ್ಲಿ ನೀವು ಬೇಗನೆ ಮದುವೆಯಾಗಿದ್ದು ಏಕೆ ಅಂತಾ ಶಾರುಕ್ ರನ್ನ ಪ್ರಶ್ನೆ ಕೇಳಿದ. ಇದಕ್ಕೆ ಶಾರುಕ್ ಕೊಟ್ಟಂತಾ ಉತ್ತರ ಏನು ಗೊತ್ತಾ..? ಭಾಯ್ ಬದುಕಿನಲ್ಲಿ ಪ್ರೀತಿ ಮತ್ತು ಅದೃಷ್ಟ ಎರಡೂ ಯಾವ ಸಮಯದಲ್ಲಿ ಬೇಕಾದ್ರು ಬರಬಹುದು. ಎರಡೂ ಕೂಡ ನನ್ನ ಬಾಳಲ್ಲಿ ಗೌರಿ ರೂಪದಲ್ಲಿ ಬಂತು ಅಂತ ಉತ್ತರ ಕೊಟ್ಟಿದ್ದಾರೆ. ಶಾರುಕ್ ಕೊಟ್ಟ ಉತ್ತರ ಗೌರಿಯವರಿಗೆ ಶಾರುಕ್ ಮೇಲಿನ ಪ್ರೀತಿ ಹೆಚ್ಚಾಗುವಂತೆ ಮಾಡಿದೆ.

ಆರು ವರ್ಷಗಳ ಪ್ರೀತಿಯ ಬಳಿಕ ಶಾರುಕ್ ಖಾನ್-ಗೌರಿ 1991 ರಲ್ಲಿ ಮದುವೆಯಾದರು. 1997 ರಲ್ಲಿ ಆರ್ಯನ್, 2000ನೇ ಇಸವಿಯಲ್ಲಿ ಸುಹಾನ್ ಮತ್ತು 2013 ರಲ್ಲಿ ಅಬ್ರಾಮ್ ಶಾರುಕ್ ಮತ್ತು ಗೌರಿ ದಂಪತಿಗೆ ಜನಿಸಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...