alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಜಯ್ ಬನ್ಸಾಲಿ ಆಫರ್ ಗೆ ನೋ ಎಂದ ಶಾರುಕ್…?

ಹತ್ತಾರು ಸವಾಲುಗಳು, ಪ್ರತಿಭಟನೆಗಳನ್ನು ಎದುರಿಸಿದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ಕೊನೆಗೂ ಪದ್ಮಾವತ್ ಚಿತ್ರವನ್ನು ರಿಲೀಸ್ ಮಾಡಲು ಯಶಸ್ವಿಯಾಗಿದ್ರು. ಅಷ್ಟೇ ಅಲ್ಲ ಪದ್ಮಾವತ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ.

ಇದೀಗ ಬನ್ಸಾಲಿ ನಿರ್ದೇಶನದ ಮುಂದಿನ ಸಿನೆಮಾ ಯಾವುದು ಅನ್ನೋದು ಎಲ್ಲರಲ್ಲೂ ಇರುವ ಕುತೂಹಲ. ಶಾರುಕ್ ಖಾನ್ ರನ್ನು ನಾಯಕ ನಟನಾಗಿ ಹಾಕಿಕೊಂಡು ಲವ್ ಸ್ಟೋರಿಯೊಂದನ್ನು ನಿರ್ಮಾಣ ಮಾಡಲು ಬನ್ಸಾಲಿ ಮುಂದಾಗಿದ್ದಾರಂತೆ.

ದೀಪಿಕಾ ಪಡುಕೋಣೆ ಅಥವಾ ಕಂಗನಾ ರನಾವತ್ ಆ ಸಿನೆಮಾದಲ್ಲಿ ಶಾರುಕ್ ಗೆ ನಾಯಕಿಯಾಗಲಿದ್ದಾರೆ ಅಂತಾ ಹೇಳಲಾಗ್ತಿದೆ. ದೇವದಾಸ್ ಚಿತ್ರದ ಆ್ಯಕ್ಟರ್-ಡೈರೆಕ್ಟರ್ ಜೋಡಿ ಮತ್ತೆ ಒಂದಾಗಲಿದ್ದಾರೆ ಅನ್ನೋ ಸುದ್ದಿ ಅಭಿಮಾನಿಗಳಿಗೂ ಖುಷಿಕೊಟ್ಟಿತ್ತು.

ಆದ್ರೆ ಶಾರುಕ್ ಖಾನ್ ಮಾತ್ರ ಬನ್ಸಾಲಿ ಆಫರ್ ಅನ್ನು ತಿರಸ್ಕರಿಸಿದ್ದಾರಂತೆ. ಈ ಹಿಂದೆ ಕೂಡ ಹಲವು ಬಾರಿ ಬನ್ಸಾಲಿ, ಶಾರುಕ್ ಜೊತೆಗೆ ಸ್ಕ್ರಿಪ್ಟ್ ಚರ್ಚಿಸಿದ್ರು. ಆದ್ರೆ ಯಾವುದೂ ಶಾರುಕ್ ಗೆ ಇಷ್ಟವಾಗಿರಲಿಲ್ಲ. ಸದ್ಯ ಆನಂದ್ ಎಲ್ ರೈ ನಿರ್ದೇಶನದ ಝೀರೋ ಚಿತ್ರದ ಶೂಟಿಂಗ್ ನಲ್ಲಿ ಶಾರುಕ್ ಬ್ಯುಸಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...