alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿ ಸಾವಿಗೆ ಕಾರಣರಾದ್ರಾ ಈ ಖ್ಯಾತ ನಟ..?

shah-rukh-khan-promotes-raees_666b3f34-e231-11e6-af2a-7d9058160009

ಶಾರುಖ್ ಖಾನ್ ಅಭಿನಯದ ‘ರಯೀಸ್’ ಚಿತ್ರದ ಪ್ರಮೋಷನ್ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ವೆಸ್ಟರ್ನ್ ರೈಲ್ವೇಸ್ ನ ಡೆಪ್ಯುಟಿ ಎಸ್ಪಿ ಸಲ್ಲಿಸಿದ್ದಾರೆ.

2017ರ ಜನವರಿ 23ರಂದು ‘ರಯೀಸ್’ ಸಿನೆಮಾ ಪ್ರಮೋಷನ್ ಗಾಗಿ ಶಾರುಖ್ ರೈಲು ಏರಿದ್ರು. ಅಗಸ್ಟ್ ಕ್ರಾಂತಿ ಎಕ್ಸ್ ಪ್ರೆಸ್ ರೈಲಿನ ಮೂಲಕ ಮುಂಬೈನಿಂದ ದೆಹಲಿಗೆ ಆಗಮಿಸಿದ್ರು. ಗುಜರಾತ್ ನ ವಡೋದರಾ ರೈಲು ನಿಲ್ದಾಣದಲ್ಲಿ ಕಿಂಗ್ ಖಾನ್ ಅಭಿಮಾನಿಗಳತ್ತ ಕೈಬೀಸಲು ರೈಲಿನಿಂದ ಹೊರಗಿಣುಕಿದ್ರು. ಈ ವೇಳೆ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರಿಂದ ಕಾಲ್ತುಳಿತ ಸಂಭವಿಸಿತ್ತು.

ಫರೀದ್ ಖಾನ್ ಪಠಾಣ್ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದ. ರೈಲು ನಿಲ್ದಾಣದಲ್ಲಿ 1500 ಜನರು ಜಮಾಯಿಸಿದ್ದರಿಂದ ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಫರೀದ್ ಖಾನ್ ಮೃತಪಟ್ಟಿದ್ದ. ಈ ಘಟನೆ ಬಗ್ಗೆ ಶಾರುಖ್ ವಿಷಾದ ವ್ಯಕ್ತಪಡಿಸಿದ್ದರು.

ಆದ್ರೆ ರೈಲಿನಲ್ಲಿ ಕುಳಿತಿದ್ದ ಶಾರುಖ್ ತಮ್ಮ ಟಿ ಶರ್ಟ್ ಹಾಗೂ ಇತರ ವಸ್ತುಗಳನ್ನು ಅಭಿಮಾನಿಗಳತ್ತ ಬಿಸಾಡಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಅಂತಾ ಡಿಎಸ್ಪಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಶಾರುಖ್ ಆ ರೀತಿ ಮಾಡದೇ ಇದ್ದಿದ್ರೆ ಜನಸಮೂಹವನ್ನು ನಿಯಂತ್ರಿಸಬಹುದಿತ್ತು ಅಂತಾ ಹೇಳಿದ್ದಾರೆ.

ಶಾರುಖ್ ನಿರ್ಲಕ್ಷ್ಯವೇ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದು, ನಟನ ವಿರುದ್ಧ ಆರೋಪ ಹೊರಿಸುವಂತೆ ಸಲಹೆ ನೀಡಿದ್ದಾರೆ. ಆದ್ರೆ ಇದುವರೆಗೂ ಶಾರುಖ್ ವಿರುದ್ಧ ಅಧಿಕೃತವಾಗಿ ದೋಷಾರೋಪ ದಾಖಲಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...