alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಮುಂದೆ ಮಂಡಿಯೂರಿದ ಬಾಲಿವುಡ್ ಬಾದ್ ಶಾ

ಬಾಲಿವುಡ್ ಬಾದ್ ಶಾ ಎನಿಸಿಕೊಂಡಿರುವ ಶಾರುಕ್ ಖಾನ್ ನಟಿ ಮುಂದೆ ಮಂಡಿಯೂರಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾರು ಆ ನಟಿ ಅಂದಿರಾ? ಮುಂದೆ ಓದಿ.

ಹೊಸ ಲಕ್ಸ್ ಗಾಗಿ ನಡೆದಿದ್ದ ಶೂಟಿಂಗ್ ವೇಳೆ ಹಿರಿಯ ನಟಿ ಶರ್ಮಿಳಾ ಠಾಗೂರ್ ಅವರು ಪಾಲ್ಗೊಂಡಿದ್ದರು. ಈ ವೇಳೆ ನಟಿಯರಾದ ಕತ್ರೀನಾ ಮತ್ತು ಕರೀನಾ ಕಪೂರ್ ಸಹ ಇದ್ದರು. ಈ ಸಂದರ್ಭದಲ್ಲಿ ತೆಗೆದ ಎರಡು ಚಿತ್ರಗಳನ್ನು ಶಾರೂಕ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕತ್ರೀನಾ, ಕರೀನಾ ಮತ್ತು ಶರ್ಮಿಳಾ ಜತೆಗಿರುವ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ. ಒಂದು ಫೋಟೊದಲ್ಲಿ ಶಾರುಕ್, ಶರ್ಮಿಳಾ ಠಾಗೂರ್ ಮುಂದೆ ಮಂಡಿಯೂರಿ ಕುಳಿತಿದ್ದಾರೆ.

ಕೆಲವು ದಿನಗಳ ಹಿಂದೆ ಶಾರೂಕ್ ತಮ್ಮ ಪುತ್ರ ಅಬ್ರಾಮ್ ಹಾಗೂ ಪುತ್ರಿ ಸುಹಾನಾ ಅವರ ಚಿತ್ರವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು. ಜತೆಗೆ ರಾಖಿ ಕಟ್ಟಿರುವ ಫೋಟೊದೊಂದಿಗೆ, ರಕ್ಷಾ ಬಂಧನವಾಗಿದೆ, ಮಹಿಳೆಯರಿಗೆ ಗೌರವ ನೀಡುವುದರಿಂದ ಸ್ಪೂರ್ತಿ ಸಿಗಲಿದೆ, ನೈತಿಕ ಬಲ ಹೆಚ್ಚಲಿದೆ, ಎಲ್ಲರಿಗೂ ಹ್ಯಾಪಿ ರಾಖಿ ಎಂದೂ ಶುಭ ಕೋರಿದ್ದರೂ ಕೂಡ.

ಸದ್ಯ ಶಾರುಕ್, ಝೀರೋ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಚಿತ್ರದಲ್ಲಿ ಕುಬ್ಜನ ಪಾತ್ರಧಾರಿಯಾಗಿದ್ದು, ಅನುಷ್ಕಾ ಮತ್ತು ಕತ್ರೀನಾ ಜತೆ ನಟಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...