alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಸ್ಟಲ್ ಅವಾರ್ಡ್ ಪಡೆದ ಶಾರುಖ್ ಬಯಸಿದ್ದೇನು ಗೊತ್ತಾ…?

ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವರ್ಣರಂಜಿತ ಸಮಾರಂಭದಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಕ್ರಿಸ್ಟಲ್ ಅವಾರ್ಡ್ ನೀಡಲಾಗಿದೆ.

ಭವ್ಯ ವೇದಿಕೆಯಲ್ಲಿ ಶಾರುಖ್ ಖಾನ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆಸ್ಟ್ರೇಲಿಯಾ ನಟಿ ಕೇಟ್ ಬ್ಲ್ಯಾಂಚೆಟ್ ಪಾಪ್ ಗಾಯಕ ಎಲ್ಟನ್ ಜಾನ್ ಅವರೂ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಶಾರುಖ್ ಖಾನ್, ಸಾಧಕರೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿಯಾಗಿದೆ. ಕ್ರಿಸ್ಟಲ್ ಪ್ರಶಸ್ತಿ ಸ್ವೀಕರಿಸಿದ ಈ ಕ್ಷಣ ಮರೆಯಲಾಗದ ಘಟನೆಯಾಗಿದೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ನಟಿ ಕೇಟ್ ಬ್ಲ್ಯಾಂಚೆಟ್ ಅವರೊಂದಿಗೆ ನಾನು ಸೆಲ್ಫಿ ತೆಗೆದುಕೊಳ್ಳಲು ಬಯಸುತ್ತೇನೆ ಎಂದು ಶಾರುಖ್ ಹೇಳಿದ್ದು, ಸಮಾರಂಭದಲ್ಲಿದ್ದವರೆಲ್ಲಾ ನಗಾಡಿದ್ದಾರೆ. ತಮ್ಮ ತಾಯಿ, ಪತ್ನಿ ಮತ್ತು ಮಗಳಿಗೆ ಧನ್ಯವಾದ ಹೇಳಿದ ಶಾರುಖ್, ನಮಸ್ಕಾರ, ಜೈ ಹಿಂದ್ ಎಂದು ಭಾಷಣ ಮುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...