alex Certify
ಕನ್ನಡ ದುನಿಯಾ       Mobile App
       

Kannada Duniya

ದೀದಿಯೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಬಂದಿಳಿದ ಶಾರೂಕ್

ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಗೆ ಪಶ್ಚಿಮ ಬಂಗಾಳದ ಕುರಿತು ವಿಶೇಷ ಅಭಿಮಾನ. ಇದನ್ನು ಹಲವಾರು ಬಾರಿ ಅವರೇ ಹೇಳಿಕೊಂಡಿದ್ದು, ಶಾರೂಕ್ ಖಾನ್ ಪಶ್ಚಿಮ ಬಂಗಾಳ ಟೂರಿಸಂ ನ ಬ್ರಾಂಡ್ ಅಂಬಾಸಿಡರ್ ಕೂಡಾ ಹೌದು. ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕರಾಗಿರುವ ಶಾರೂಕ್, ಪಶ್ಚಿಮ ಬಂಗಾಳ ತಮಗೆ ಮತ್ತೊಂದು ಮನೆಯಂತೆ ಎಂದಿದ್ದರು.

ಬಾಲಿವುಡ್ ನ ಅನಭಿಷಿಕ್ತ ದೊರೆಯಾಗಿರುವ ಶಾರೂಕ್ ಬಳಿ ಐಷಾರಾಮಿ ಕಾರುಗಳಿಗೆ ಕೊರತೆಯೇನಿಲ್ಲ. ಮುಂಬೈನಿಂದ ಹೊರ ಊರುಗಳಿಗೆ ಹೋದಾಗಲೂ ಶಾರೂಕ್ ಪ್ರಯಾಣಿಸುವುದು ದುಬಾರಿ ಕಾರುಗಳಲ್ಲೇ. ಆದರೆ ಇತ್ತೀಚೆಗೆ ಕೋಲ್ಕತ್ತಾಗೆ ಭೇಟಿ ನೀಡಿದ್ದ ಶಾರೂಕ್, ವಿಮಾನ ನಿಲ್ದಾಣಕ್ಕೆ ಬರುವ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸ್ಯಾಂಟ್ರೋ ಕಾರಿನಲ್ಲಿ ಆಗಮಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದರು.

ಮಮತಾ ಬ್ಯಾನರ್ಜಿಯವರನ್ನು ತಮ್ಮ ಹಿರಿಯ ಸಹೋದರಿ ಎಂದೇ ಹೇಳುವ ಶಾರೂಕ್, ಪ್ರತಿ ವರ್ಷವೂ ರಕ್ಷಾ ಬಂಧನದ ವೇಳೆ ದೀದಿಯ ಶುಭ ಹಾರೈಕೆಯನ್ನು ನಿರೀಕ್ಷಿಸುತ್ತಿರುತ್ತೇನೆ ಎಂದು ಹೇಳಿಕೊಂಡಿದ್ದರು. ಕೋಲ್ಕತ್ತಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಶಾರೂಕ್, ಮಮತಾ ಬ್ಯಾನರ್ಜಿಯವರ ಸ್ಯಾಂಟ್ರೋ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ ಅಲ್ಲಿಯೇ ದೀದಿ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಮಮತಾ ಬ್ಯಾನರ್ಜಿಯವರೂ ಸಹ ಅಭಿಮಾನಿಗಳು ಶಾರೂಕ್ ರನ್ನು ಸುತ್ತುವರೆಯದಂತೆ ನೋಡಿಕೊಳ್ಳಲು ಸ್ವತಃ ತಾವೇ ಭದ್ರತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...