alex Certify
ಕನ್ನಡ ದುನಿಯಾ       Mobile App
       

Kannada Duniya

ವಿತರಕರಿಗೆ ನಷ್ಟ ಭರಿಸಿ ಕೊಡ್ತಿದ್ದಾರೆ ಈ ಖ್ಯಾತ ನಟ

ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಜೋಡಿಯಾಗಿ ನಟಿಸಿದ್ದ ‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಂಪೂರ್ಣ ನೆಲಕಚ್ಚಿತ್ತು. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ರೂ, ಪ್ರೇಕ್ಷಕರು ಮಾತ್ರ ಅದನ್ನು ಮೆಚ್ಚಿಕೊಂಡಿರಲಿಲ್ಲ.

ಇದರಿಂದಾಗಿ ಚಿತ್ರದ ವಿತರಕರರು ಭಾರೀ ನಷ್ಟ ಅನುಭವಿಸಿದ್ದರು. ಆದ್ರೀಗ ಖುದ್ದು ಶಾರುಖ್ ಖಾನ್ ಅವರ ನೆರವಿಗೆ ಬಂದಿದ್ದಾರೆ. ವಿತರಕರಿಗಾದ ನಷ್ಟದಲ್ಲಿ ಶೇ.30ರಷ್ಟನ್ನು ತಾವೇ ಭರಿಸಿಕೊಡಲು ಮುಂದಾಗಿದ್ದಾರೆ. ಜಬ್ ಹ್ಯಾರಿ ಮೆಟ್ ಸೇಜಲ್ ಚಿತ್ರ ಕನಿಷ್ಠ 100 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು.

ಆದ್ರೆ ಈ ಸಿನೆಮಾದಿಂದಾದ ಸಂಪಾದನೆ ಕೇವಲ 62 ಕೋಟಿ ರೂಪಾಯಿ. ಶಾರುಖ್, ಎನ್ ಎಚ್ ಸ್ಟುಡಿಯೋಸ್ ಗೆ ಶೇ.15ರಷ್ಟು ಮತ್ತು ಉಳಿದ ವಿತರಕರಿಗೆ ಶೇ.30ರಷ್ಟು ನಷ್ಟ ಭರಿಸುತ್ತಿದ್ದಾರಂತೆ. ಟ್ಯೂಬ್ ಲೈಟ್ ಚಿತ್ರದ ಸೋಲಿನಿಂದಾಗಿ ನಟ ಸಲ್ಮಾನ್ ಖಾನ್ ಕೂಡ ವಿತರಕರಿಗೆ ನಷ್ಟ ಭರಿಸಿಕೊಟ್ಟಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...