alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಸೂಯಿ ಧಾಗಾ ಚಾಲೆಂಜ್ ನಲ್ಲಿ ಶಾರುಕ್ ಗೆ ಜಯ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವರುಣ್ ಧವನ್ ಸದ್ಯ ಸೂಯಿ ಧಾಗಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಪ್ರಚಾರದ ಜೊತೆ ಟ್ವೀಟರ್ ನಲ್ಲಿ ಸೂಯಿ ಧಾಗಾ ಚಾಲೆಂಜ್ ಶುರು ಮಾಡಿದ್ದಾರೆ. ಚಾಲೆಂಜ್ ಸ್ವೀಕರಿಸುವವರು 10 ಸೆಕೆಂಡ್ ನಲ್ಲಿ ಸೂಜಿಯೊಳಗೆ ದಾರವನ್ನು ಪೋಣಿಸಬೇಕು.

ಅನುಷ್ಕಾ, ಧವನ್ ಚಾಲೆಂಜ್ ಸ್ವೀಕರಿಸಿದ ಅನೇಕ ಬಾಲಿವುಡ್ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸೂಜಿಗೆ ದಾರ ಪೋಣಿಸಿದ ಫೋಟೋ ಹಾಕಿದ್ದಾರೆ. ಈಗಾಗಲೇ ರಣಬೀರ್ ಕಪೂರ್, ಆಲಿಯಾ ಭಟ್, ಆದಿತ್ಯ ರಾಯ್ ಕಪೂರ್ ಚಾಲೆಂಜ್ ನಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಅಕ್ಷಯ್ ಕುಮಾರ್ ಚಾಲೆಂಜ್ ಸೋತಿದ್ದಾರೆ.

ಅನುಷ್ಕಾ, ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ ರಿಗೂ ಈ ಚಾಲೆಂಜ್ ಹಾಕಿದ್ದಾರೆ. ಅನುಷ್ಕಾ ಚಾಲೆಂಜ್ ಸ್ವೀಕರಿಸಿರುವ ಶಾರುಕ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ದೊಡ್ಡ ಸೂಜಿಗೆ ಶಾರುಕ್ ದಾರ ಪೋಣಿಸಿದ್ದಾರೆ. ಕೇವಲ 0.000000001 ಸೆಕೆಂಡ್ ನಲ್ಲಿ ಶಾರುಕ್ ಈ ಕೆಲಸ ಮಾಡಿದ್ದಾರೆ. ವಿಡಿಯೋ ನೋಡಿದ ಅನುಷ್ಕಾ, ಚಾಲೆಂಜ್ ವಿನ್ನರ್ ಶಾರುಕ್ ಎಂದು ಘೋಷಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...