alex Certify
ಕನ್ನಡ ದುನಿಯಾ       Mobile App
       

Kannada Duniya

ಗಾಳಿಪಟ ಹಾರಿಸಿ ಹಬ್ಬ ಆಚರಿಸಿದ ಸೂಪರ್ ಸ್ಟಾರ್….

ಸೂಪರ್ ಸ್ಟಾರ್ ಶಾರುಕ್ ಖಾನ್ ಎಲ್ಲ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸ್ತಾರೆ. ದೀಪಾವಳಿ, ಗಣೇಶ ಚತುರ್ಥಿ ಸೇರಿದಂತೆ ಹಿಂದುಗಳ ಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸ್ತಾರೆ. ದೇಶದೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಶಾರುಕ್ ಕೂಡ ಮಕರ ಸಂಕ್ರಾಂತಿ ಆಚರಿಸಿದ್ದಾರೆ.

ಝೀರೋ ಚಿತ್ರ ತಂಡದ ಜೊತೆ ಸೆಟ್ ನಲ್ಲಿ ಶಾರುಕ್ ಮಕರ ಸಂಕ್ರಾಂತಿ ಆಚರಿಸಿದ್ದಾರೆ. ಭಾನುವಾರ ರಾತ್ರಿ ಫೋಟೋವೊಂದನ್ನು ಶಾರುಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ ಶಾರುಕ್. ಮಕರ ಸಂಕ್ರಾಂತಿ ಆಚರಿಸುತ್ತಿದ್ದೇನೆ. ದೇಶದಾದ್ಯಂತ ರೈತರು ಕೊಯ್ಲು ಹಾಗೂ ಸಮೃದ್ಧಿಯ ಸಂಕೇತವಾಗಿ ಈ ಹಬ್ಬ ಆಚರಿಸುತ್ತಾರೆ. ಆನಂದ್ ಎಲ್. ರಾಯ್ ಚಿತ್ರ ತಂಡದ ಜೊತೆ ಹಬ್ಬ ಆಚರಿಸಿದ್ದು ಖುಷಿಯಾಯ್ತು ಎಂದು ಶಾರುಕ್ ಶೀರ್ಷಿಕೆ ಹಾಕಿದ್ದಾರೆ.

ಝೀರೋದಲ್ಲಿ ಶಾರುಕ್ ಖಾನ್ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಕ್ ಜೊತೆ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ನಟಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...