alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ನಟನಿಂದ ಲೈಂಗಿಕ ಕಿರುಕುಳ, ದೂರು ನೀಡಿದ ಕಸಿನ್

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಜಿತೇಂದ್ರ ಸೋದರ ಸಂಬಂಧಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿದೆ. ಬುಧವಾರ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಜಿತೇಂದ್ರ ವಿರುದ್ಧ ದೂರು ದಾಖಲಾಗಿದೆ.

ಜಿತೇಂದ್ರ ಅವರಿಗೆ 28 ವರ್ಷವಾಗಿದ್ದ ಸಂದರ್ಭದಲ್ಲಿ 18 ವರ್ಷದವರಾಗಿದ್ದ ಕಸಿನ್ ರನ್ನು ಚಿತ್ರೀಕರಣದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಜಿತೇಂದ್ರ ಲೈಂಗಿಕ ಕಿರುಕುಳ ನೀಡಿದ್ದಾರೆ. ಇಷ್ಟು ವರ್ಷಗಳ ಕಾಲ ಮಾನಸಿಕ ಯಾತನೆ ಅನುಭವಿಸಿದ ಮಹಿಳೆ ಈಗ ದೂರು ನೀಡಿದ್ದಾರೆ.

ತಮ್ಮ ತಂದೆಯಿಂದ ಒಪ್ಪಿಗೆ ಪಡೆದು ಚಿತ್ರೀಕರಣ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.

ನಟ ಜಿತೇಂದ್ರರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ಯಾತನೆ ಅನುಭವಿಸಿದ್ದೇನೆ. ಇಷ್ಟು ವರ್ಷಗಳ ನಂತರವಾದರೂ ನನಗೆ ನ್ಯಾಯ ಸಿಗಲಿ ಎಂದು ಮಹಿಳೆ ದೂರು ನೀಡಿದ್ದು, ತಮ್ಮ ಹೆಸರನ್ನು ಕಾನೂನು ಪ್ರಕಾರ ಗೌಪ್ಯವಾಗಿಡುವಂತೆ ಮನವಿ ಮಾಡಿದ್ದಾರೆ. 75 ವರ್ಷದ ಜಿತೇಂದ್ರ ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...