alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಂಡತಿಗೆ ಫಿಟ್ನೆಸ್ ತರಬೇತಿ ನೀಡ್ತಿದ್ದಾನೆ ಈ ನಟ

image3-compressed1

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಮತ್ತೊಮ್ಮೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ. ಶಾಹಿದ್ ಹಾಗೂ ಮೀರಾ ಜಿಮ್ ಗೆ ಬರ್ತಿದ್ದ ವೇಳೆ ಸುಂದರ ಜೋಡಿಯ ಫೋಟೋವನ್ನು ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ. ಶಾಹಿದ್ ಹಾಗೂ ಮೀರಾ ಜಿಮ್ ಗೆ ಬರುವ ಕೆಲ ಗಂಟೆಗಳ ಹಿಂದಷ್ಟೇ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ಶಾಹಿದ್ ಹಾಗೂ ಮೀರಾ ಫಿಟ್ನೆಸ್ ಗೆ ಹೆಚ್ಚಿನ ಆದ್ಯತೆ ನೀಡ್ತಾರೆ. ಸಮಯ ಹೊಂದಿಸಿಕೊಂಡು ಪ್ರತಿದಿನ ಜಿಮ್ ಗೆ ಬರುವ ಶಾಹಿದ್ ಹಾಗೂ ಮೀರಾ ಜಿಮ್ ನಲ್ಲಿ ಬೆವರಿಳಿಸ್ತಾರೆ. ಮೀರಾಗೆ ಶಾಹಿದ್ ಸ್ಪೂರ್ತಿಯಂತೆ. ಹಿಂದಿನ ವರ್ಷ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಮೀರಾ ಮತ್ತೆ ಫಿಟ್ ಆಗಿದ್ದಾರೆ. ಪತಿಯ ಸಲಹೆಯಂತೆ ತೂಕ ಇಳಿಸಿಕೊಂಡು ಮಿಂಚುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಶಾಹಿದ್ ಆಗಾಗ ತಮ್ಮ ಮಗಳು ಇಶಾ ಫೋಟೋ ಹಾಗೂ ವಿಡಿಯೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕ್ತಿರ್ತಾರೆ. ಕರೀನಾ ಕಪೂರ್ ಜೊತೆಗೆ ಬ್ರೇಕ್ ಅಪ್ ಆದ ನಂತ್ರ ಅನೇಕ ವರ್ಷ ಒಂಟಿಯಾಗಿದ್ದರು ಶಾಹಿದ್. 2015ರಲ್ಲಿ ದೆಹಲಿ ವಿವಿಯ ವಿದ್ಯಾರ್ಥಿನಿ ಮೀರಾ ರಜಪೂತ್ ರ ಕೈ ಹಿಡಿದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...