alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಬ್‌ ತಕ್‌ ಛಪ್ಪನ್‌’ ಚಿತ್ರದ ಸಹಾಯಕ ನಿರ್ದೇಶಕ ಆತ್ಮಹತ್ಯೆಗೆ ಶರಣು

ನಾನಾ ಪಾಟೇಕರ್ ಅಭಿನಯದ ‘ಅಬ್‌ ತಕ್‌ ಛಪ್ಪನ್‌’ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ 32 ವರ್ಷದ  ರವಿಶಂಕರ್‌ ಅಲೋಕ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಶ್ಚಿಮ ಅಂಧೇರಿಯ ಸೆವೆನ್‌ ಬಂಗ್ಲೋಸ್‌ ನಿವಾಸಿಯಾಗಿದ್ದ ರವಿಶಂಕರ್‌ ಬುಧವಾರ ತಡ ರಾತ್ರಿ ಕಟ್ಟಡದ ಮೇಲಿನಿಂದ ಜಿಗಿದು ಸಾವಿಗೆ ಶರಣಾಗಿದ್ದಾರೆ.

ಕಾವಲುಗಾರ ಭಾರೀ ಸದ್ದು ಕೇಳಿ ಸ್ಥಳಕ್ಕೆ ತೆರಳಿದಾಗ ರಕ್ತದ ಮಡುವಿನಲ್ಲಿ ರವಿಶಂಕರ್‌ ಬಿದ್ದಿದ್ದು ಕಂಡು ಬಂದಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ರವಿಶಂಕರ್‌ ಜೊತೆ ತಂದೆ, ತಾಯಿ ಹಾಗೂ ಸಹೋದರ ವಾಸವಾಗಿದ್ದು, ತಂದೆ-ತಾಯಿ ಕೆಲ ದಿನಗಳ ಹಿಂದಷ್ಟೇ ಪಾಟ್ನಾಗೆ ತೆರಳಿದ್ದರೆನ್ನಲಾಗಿದೆ. ಸಹೋದರ ಘಟನೆ ನಡೆದಾಗ ಮನೆಯಲ್ಲಿರಲಿವೆನ್ನಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...