alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಷನ್ ಶೋನಲ್ಲಿ ಮಾಡೆಲ್ ಬದಲು ಡ್ರೋನ್ ಮಾಡ್ತು ರ್ಯಾಂಪ್ ವಾಕ್

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಅನೇಕ ನಿರ್ಬಂಧಗಳಿವೆ. ನಿಧಾನವಾಗಿ ಪರಿಸ್ಥಿತಿ ಬದಲಾಗ್ತಿದೆ. ಮಹಿಳೆಯರಿಗೆ ಅನೇಕ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ ನೀಡಲಾಗ್ತಿದೆ. ಇದಾಗ್ಯೂ ಸೌದಿ ಅರೇಬಿಯಾ ಮಹಿಳೆಯರು ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಮಹಿಳೆಯರ ಬಟ್ಟೆ ಪ್ರದರ್ಶನಕ್ಕೆ ವಿನ್ಯಾಸಕಾರರು ವಿಭಿನ್ನ ಮಾರ್ಗ ಬಳಸಿದ್ರು.

ರಂಜಾನ್ ಪ್ರಯುಕ್ತ ಜೆಡ್ಡಾದ ಹಿಲ್ಟನ್ ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಮಾಡೆಲ್ ಗಳ ಬದಲು ಡ್ರೋನ್ ಬಳಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫ್ಯಾಷನ್ ಶೋ ವಿಡಿಯೋ ವೈರಲ್ ಆಗಿದೆ. ಅನೇಕ ಬಳಕೆದಾರರು ಈ ಶೋವನ್ನು ಭೂತಗಳ ಫ್ಯಾಷನ್ ಶೋ ಎಂದು ಕರೆದಿದ್ದಾರೆ.

ಡ್ರೋನ್ ಬಳಸಿ ಒಂದಾದ ಮೇಲೆ ಒಂದು ಡ್ರೆಸ್ ಪ್ರದರ್ಶನ ಮಾಡಲಾಗಿದೆ. ಡ್ರೋನ್ ನಲ್ಲಿ ಬರ್ತಿದ್ದ ಡ್ರೆಸ್ ಗಾಳಿಯಲ್ಲಿ ಬರ್ತಿದ್ದಂತೆ ಭಾಸವಾಗ್ತಿತ್ತು. ರ್ಯಾಂಪ್ ವಾಕ್ ಗೆ ಡ್ರೋನ್ ಬಳಸಿದ್ದು ಇದೇ ಮೊದಲಲ್ಲ. ಫೆಬ್ರವರಿಯಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಕೂಡ ಡ್ರೋನ್ ಬಳಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...