alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಮೋಡಿ ಮಾಡಲಿದ್ದಾರೆ ಶರಣ್, ಚಿಕ್ಕಣ್ಣ

ತಮ್ಮದೇ ಶೈಲಿಯ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ ಶರಣ್ ಮತ್ತು ಚಿಕ್ಕಣ್ಣ ಮತ್ತೆ ಬರುತ್ತಿದ್ದಾರೆ. ಇವರಿಬ್ಬರು ಅಭಿನಯಿಸಿರುವ ‘ಸತ್ಯ ಹರಿಶ್ಚಂದ್ರ’ ಅಕ್ಟೋಬರ್ 20 ರಂದು ತೆರೆ ಕಾಣ್ತಿದೆ.

ಭಾರೀ ಯಶಸ್ಸು ಕಂಡಿದ್ದ ‘ಅಧ್ಯಕ್ಷ’ ಚಿತ್ರದ ಬಳಿಕ, ‘ರಾಜ್ ವಿಷ್ಣು’ ಚಿತ್ರದಲ್ಲಿ ಇಬ್ಬರು ಮಿಂಚಿದ್ದರು. ಈಗ ‘ಸತ್ಯ ಹರಿಶ್ಚಂದ್ರ’ರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಿಂದಲೂ ಕುತೂಹಲ ಮೂಡಿಸಿರುವ ‘ಸತ್ಯ ಹರಿಶ್ಚಂದ್ರ’ದಲ್ಲಿ ಹಾಸ್ಯ ಪಾತ್ರಗಳ ಸಿನಿ ರಸಿಕರನ್ನು ರಂಜಿಸಲಿದ್ದಾರೆ.

ಕೆ. ಮಂಜು ನಿರ್ಮಾಣದಲ್ಲಿ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಜಾಕ್ ಮಂಜು ಹಂಚಿಕೆ ಮಾಡಲಿರುವ ಈ ಚಿತ್ರ ಸುಮಾರು 250 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ದೀಪಾವಳಿಗೆ ಸಾಲು ಸಾಲು ರಜೆ ಇರುವುದರಿಂದ ಸಿನಿರಸಿಕರಿಗೆ ನಗೆಹಬ್ಬ ಗ್ಯಾರಂಟಿ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...