alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ವರ್ಕೌಟ್ ಮಾಡಿದ್ದಾರೆ ಸತೀಶ್ ನೀನಾಸಂ

‘ಲೂಸಿಯಾ’ ಸ್ಟಾರ್ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯಿಸುತ್ತಿರುವ ‘ಅಯೋಗ್ಯ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಕಾಮಿಡಿ ಡ್ರಾಮಾ ಆಗಿರುವ ‘ಅಯೋಗ್ಯ’ ಚಿತ್ರದಲ್ಲಿ ವಿಲನ್ ಆಗಿ ರವಿಶಂಕರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸತೀಶ್ ನೀನಾಸಂ ವಿಶೇಷ ತಯಾರಿ ನಡೆಸಿದ್ದಾರೆ. ಕಾಮಿಡಿ ಡ್ರಾಮಾ ಆಗಿದ್ದರೂ, ಚಿತ್ರದಲ್ಲಿ ಆಕ್ಷನ್ ಸೀನ್ ಗಳಿಗೂ ಒತ್ತು ನೀಡಲಾಗಿದೆ.

ಇದಕ್ಕೆ ತಕ್ಕಂತೆ ಸತೀಶ್ ತಮ್ಮ ದೇಹವನ್ನು ದಂಡಿಸಿ ಹುರಿಗೊಳಿಸಿದ್ದಾರೆ. ಚಿತ್ರದ ಫೈಟಿಂಗ್ ದೃಶ್ಯಗಳಿಗಾಗಿ ಸತೀಶ್ ವರ್ಕೌಟ್ ಮಾಡಿದ್ದು, ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾವು ವರ್ಕೌಟ್ ಮಾಡ್ತಿರುವ ಫೋಟೋವನ್ನು ಸತೀಶ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ. ’ಅಯೋಗ್ಯ’ನಿಗಾಗಿ ಮಂಡ್ಯ ಜಿಲ್ಲೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿದ ಮಹೇಶ್ ನಿರ್ದೇಶಿಸಿರುವ ಚಿತ್ರವನ್ನು ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...